

ಮೈಸೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬ್ರಹ್ಮವಿದ್ಯಾ, ಡಿವಿಜಿ ಬಳಗದ ಪ್ರತಿಷ್ಠಾನದಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಮೂರು ದಿನಗಳ ಸಂಗೀತೋತ್ಸವದಲ್ಲಿ ವಿವಿಧ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ. ರಾ.ಸತ್ಯನಾರಾಯಣ ಸಂಸ್ಮರಣ ಉತ್ಸವ-2025, ಭಾರತೀಯ ಸಂಗೀತಶಾಸ್ತ್ರ ದಿನಾಚರಣೆ ಅಂಗವಾಗಿ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಿದ್ದ ಮೂರು ದಿನಗಳ ಸಂಗೀತೋತ್ಸವ ಭವ್ಯ ಪ್ರಶಸ್ತಿ ನೀಡಲಾಯಿತು.
ಸಂಸ್ಕೃತ, ವೇದಶಾಸ್ತ್ರ ವಿಭಾಗದಲ್ಲಿ ಅತ್ಯುನ್ನತ ಸಾಧನೆ ತೋರಿದ ಸಾಂಚಿ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಯಜ್ಞೇಶ್ವರ ಎಸ್ ಶಾಸ್ತ್ರಿ ಅವರಿಗೆ ವೇದಶಾಸ್ತ್ರ ಸೂರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ನಾಟ್ಯವಿದುಷಿ ಪಾರ್ವತಿ ದತ್ತ ಅವರಿಗೆ ಡಾ. ರಾ. ಸತ್ಯನಾರಾಯಣ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಾಧ್ಯಾಪಕಿ ಡಾ. ಜ್ಯೋತಿ ಶಂಕರ್ ಅವರು ಕನ್ನಡ ಕಾವ್ಯ ವಾಚನ, ಆಯುರ್ಧಾಮ ವೈದ್ಯ ಡಾ. ಪ್ರಶಾಂತ್ ಭಟ್ ಆರೋಗ್ಯ ದಿನಚರಿ ವಿಶೇಷ ಬೋಧನಾ ಕಾರ್ಯಕ್ರಮ ನಡೆಸಿಕೊಟ್ಟರು.
ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಮಹಾರಾಣಿ ಕ್ಲಸ್ಟರ್ ವಿವಿ ರಿಜಿಸ್ಟ್ರಾರ್ ಡಾ. ಶ್ರೀಕಾಂತಮ್ ನಾಗೇಂದ್ರಶಾಸ್ತ್ರಿ, ಬ್ರಹ್ಮವಿದ್ಯಾ ನಿರ್ದೇಶಕಿ ಡಾ. ರಾಧಿಕಾ ನಂದಕುಮಾರ್, ಡಿವಿಜಿ ಬಳಗದ ನಿರ್ದೇಶಕ ಕಾಂತರಾಜು, ನಂದಕುಮಾರ್ ಇದ್ದರು.