ಸೌಲಭ್ಯಗಳ ಸದುಪಯೋಗಕ್ಕೆ ಕರೆ

CEO visit photos
Published on

ಯಾದಗಿರಿ: ಜಿಪಂ ಸಿಇಒ ಶಿಲ್ಪಾ ಶರ್ಮಾ ಬುಧವಾರ ಶಹಾಪುರ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ನಾಯ್ಕಲ್ ಗ್ರಾಮದಲ್ಲಿ ಮಂಗಳವಾರ ಆರಂಭಗೊಂಡಿರುವ ಪುರಾತನ ಕಲ್ಯಾಣಿ ಪುನಶ್ಚೇತನ ಕಾಮಗಾರಿ ಪರಿಶೀಲಿಸಿದ ನಂತರ ಖಾನಾಪುರ ಗ್ರಾಮದ ಸರ್ವೇ ನಂ. 918ರ ಫಲಾನುಭವಿ ಬಸ್ಸಮ್ಮ ಗಂಡ ಬಸ್ಸಪ್ಪ ಅವರ ಜಮೀನಿನಲ್ಲಿ ಅನುಷ್ಠ್ಠಾನಗೊಳ್ಳುತ್ತಿರುವ ಬದು ನಿರ್ಮಾಣ ಕಾಮಗಾರಿಪರಿಶೀಲಿಸಿ, ಕೆಲಸ ಮಾಡುತ್ತಿದ್ದ 6 ಜನ ಕೂಲಿಕಾರರೊಂದಿಗೆ ಚರ್ಚೆ ನಡೆಸಿದರು. ಅವರಲ್ಲಿ ದಿನವೊಂದಕ್ಕೆ 275 ರೂ. ಕೂಲಿ ಸಿಗುವ ಮಾಹಿತಿ ಇರುವುದನ್ನು ಹಾಗೂ ಕೂಲಿಯ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿರುವ ಬಗ್ಗೆ ತಿಳಿದುಕೊಂಡರು. ಈ ಸಂದರ್ಭದಲ್ಲಿ ಕೂಲಿಕಾರರ ಎನ್ಎಂಆರ್ ಕೂಡ ಪರಿಶೀಲಿಸಿದರು.

ನಂತರ ಖಾನಾಪುರ ಸಕರ್ಾರಿ ಪ್ರೌಢಶಾಲೆಗೆ ಭೇಟಿ ನೀಡಿ ಮಳೆ ನೀರು ಕೊಯ್ಲು, ಕಿಚನ್ ಗಾರ್ಡನ್ ಮತ್ತು ಅಂತರ್ಜಲ ಮರುಪೂರಣ ಕಾಮಗಾರಿಗಳನ್ನು ತೆಗೆದುಕೊಳ್ಳಲು ಸ್ಥಳ ಗುರುತಿಸುವ ಜತೆಗೆ ಕಾಮಗಾರಿ ಕೂಡಲೇ ಆರಂಭಿಸಲು ಸೂಚಿಸಿದರು.

ರಸ್ತಾಪುರ ಗ್ರಾಪಂನ ಶಾರದಹಳ್ಳಿ ಗ್ರಾಮದಲ್ಲಿ ಅನುಷ್ಠ್ಠಾನಗೊಂಡು ಮುಕ್ತಾಯದ ಹಂತದಲ್ಲಿರುವ ಕಲ್ಯಾಣಿ ಪುನಶ್ಚೇತನ ಕಾಮಗಾರಿಯನ್ನು ಪರಿಶೀಲಿಸಿದರು. ಈ ಕಲ್ಯಾಣಿಯಲ್ಲಿ ಗಿಡಮರಗಳ ಎಲೆಕಸ ಬೀಳದಂತೆ ಹಾಗೂ ಮಕ್ಕಳು ಒಳಗಡೆ ಇಳಿಯದಂತೆ ಗೇಟ್ ಕೂಡಿಸಿ, ಜಾಲರಿ ಹಾಕಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಅವರು ಸೂಚಿಸಿದರು.

ಜನತೆ ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಗಡೆ ಬರಬೇಕು. ಆಗಾಗ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಕೆಮ್ಮುವಾಗಿ ಕರವಸ್ತ್ರ ಬಳಸಬೇಕು ಎಂದು ಸಲಹೆ ನೀಡಿದರು. ಜಿಪಂ ಉಪ ಕಾರ್ಯದಶರ್ಿ ಮುಕ್ಕಣ್ಣ ಕರಿಗಾರ, ಎಡಿಪಿಸಿ ಬನ್ನಪ್ಪ, ಡಿಐಇಸಿ ಪರಶುರಾಮ, ಶಹಾಪುರ ಸಹಾಯಕ ನಿದರ್ೇಶಕ ಶಾರದಾ, ಟಿಸಿ ರವೀಂದ್ರ ದೇಸಾಯಿ, ಟಿಐಇಸಿ ಭೀಮರೆಡ್ಡಿ, ಪಿಡಿಒ ರೇವಣಸಿದ್ದಪ್ಪ, ಅಕ್ಕನಾಗಮ್ಮ, ಟಿಎಇಗಳಾದ ಅಮರೇಶ ಸ್ವಾಮಿ, ಶಶಿಕಾಂತ ಮತ್ತು ಮಂಜುನಾಥ ಇದ್ದರು.

ಗ್ರಾಮೀಣ ಭಾಗದ ಜನತೆ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಜನತೆಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡುತ್ತಿದೆ. ಇದರ ಸೌಲಭ್ಯ ಪಡೆದುಕೊಳ್ಳಬೇಕು. ಜತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಬೇಕು.
| ಶಿಲ್ಪಾ ಶರ್ಮಾ, ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net