

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಪ್ರಿಯದರ್ಶಿನಿ ಕಾಲನಿಯ ಎನ್ಎಲ್ಇ ಸೊಸೈಟಿಯ ಡಾ.ಆರ್.ಬಿ. ಪಾಟೀಲ್ ಮಹೇಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 9ಮತ್ತು 10ನೇ ನೇತರಗತಿ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮದ ‘ವಾರಿಧಿ-3.0’ನ ಬ್ಯಾನರ್ ಮತ್ತು ಭಿತ್ತಿಪತ್ರವನ್ನು ಬುಧವಾರ ಅನಾವರಣಗೊಳಿಸಲಾಯಿತು.
ಎಸ್.ಆರ್. ಬೊಮ್ಮಾಯಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ರೇಖಾ ತುಪ್ಪದ ಬಿಡುಗೊಡೆಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಇದರಿಂದ ತಮ್ಮ ಪ್ರತಿಭೆ ಹೊರಹೊಮ್ಮಿಸಲು ಸುರ್ವಣಾವಕಾಶ ಲಭಿಸುತ್ತದೆ ಎಂದರು.
ಪ್ರಾಚಾರ್ಯ ಎಚ್.ಕೆ. ರಾಮಮೋಹನ ಮಾತನಾಡಿ, ನ. 18ರಂದು ಈ ಕಾರ್ಯಕ್ರಮ 8 ವಿಭಾಗಗಳಲ್ಲಿ ನಡೆಯಲಿದೆ. ಇಂಗ್ಲಿಷ್ ಶಬ್ದ ಸಂಪತ್ತು, ನಾಯಕತ್ವದ ಗುಣ, ಅಗ್ನಿರಹಿತ ಆಹಾರ ತಯಾರಿಕೆ, ನೃತ್ಯಾಭಿನಯ, ವಿಜ್ಞಾನ ಮತ್ತು ಗಣಿತ ತಂತ್ರಗಾರಿಕೆ, ಸೃಜನಾತ್ಮಕ ಕಲೆ, ಪರಿಕಲ್ಪನಾ ಗಾನ ಮತ್ತು ಶಿಕ್ಷಕರಿಗಾಗಿ ಒತ್ತಡ ನಿರ್ವಹಣೆ ಎಂಬ ವಿಷಯಗಳನ್ನು ಒಳಗೊಂಡಿದೆ ಎಂದು ಹೇಳಿದರು.
ಈ ಕಾರ್ಯಕ್ರಮವು 2 ವರ್ಷಗಳಿಗೊಮ್ಮೆ ಅಂತರ ಶಾಲಾ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗಾಗಿ ಸಂಘಟಿಸಲಾಗುತ್ತಿದೆ. ಧಾರವಾಡ, ಗದಗ, ಲಕ್ಷೆ್ಮೕಶ್ವರ, ಹಾವೇರಿ, ಶಿಗ್ಗಾಂವಿ, ನರಗುಂದ, ನವಲಗುಂದ, ಕಲಘಟಗಿ, ದಾಂಡೇಲಿ ಮುಂತಾದ ಊರುಗಳಿಂದ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥ ನೀಲ್ ಪ್ರತಾಪನ್ ನಿರೂಪಿಸಿದರು. ಉಪಪ್ರಾಚಾರ್ಯ ರಮೇಶ ಹೊಂಬಾಳೆ ಹಾಗೂ ಕಾಲೇಜಿನ ವಿದ್ಯಾರ್ಥಿ ಪರಿಷತ್ ಪ್ರಧಾನ ಕಾರ್ಯದರ್ಶಿಗಳಾದ ಅಸ್ಮೀರ್ ಅಮ್ಮಾನಗಿ, ಸಾಯಿಶ್ರುತವತಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಅರ್ಹನ್ ಪತ್ರಾವಳಿ, ದಿಶಾ ಕ್ಷತ್ರಿಯಾ, ತಪಸ್ಯಾ ಮತ್ತು ನಿತೀಶ ಚಾವಡಿಮನಿ ಇತರರಿದ್ದರು.