

ವಿಜಯಪುರ: ಕೊಲ್ಹಾರ ಶುದ್ಧ ಕುಡಿಯುವ ನೀರಿನ ಟಕದಿಂದ ನಗರಕ್ಕೆ ನೀರು ಸರಬರಾಜಾಗುವ ವಿವಿಧ ಪ್ರದೇಶಗಳಿಗೆ ಡಿ. 29 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
110/11 ಕೆವಿ ಮಟ್ಟಿಹಾಳ ವಿದ್ಯುತ್ ಉಪಕೇಂದ್ರದಲ್ಲಿ ಮೂರನೇ ತೆಮಾಸಿಕ ನಿರ್ವಹಣಾ ಕಾರ್ಯ ನಡೆಯುವ ಹಿನ್ನೆಲೆಯಲ್ಲಿ ಮಟ್ಟಿಹಾಳ ಕೇಂದ್ರದಿಂದ ಹೊರಹೋಗುವ ಎಲ್ಲ 33 ಕೆವಿ ಮತ್ತು 11 ಕೆವಿ ಮಾರ್ಗಗಳಲ್ಲಿ ಡಿ. 29 ರಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕೊಲ್ಹಾರ ಮುಖ್ಯ ಸ್ಥಾವರ ಹಾಗೂ ಮುಳವಾಡ ಮಧ್ಯಂತರ ಪಂಪಿಂಗ್ ಸ್ಟೇಷನ್ಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ನೀರು ಪೂರೈಕೆಯಲ್ಲಿ ನಿಲುಗಡೆಯಾಗಲಿದೆ.
ಅಲ್ಲದೆ, ಅಂದು ಮಂಡಳಿ ವತಿಯಿಂದ ಕೆಲವು ನಿರ್ವಹಣೆ ಕಾಮಗಾರಿ ಕೈಗೊಳ್ಳುವುದರಿಂದ ನೀರು ಪೂರೈಕೆಯಲ್ಲಿ ಭಾನುವಾರ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.