

ಬ್ಯಾಡಗಿ: ಬ್ಯಾಡಗಿ ವಿದ್ಯುತ್ ವಿತರಣೆ ಕೇಂದ್ರದಲ್ಲಿ ತ್ರೈಮಾಸಿಕ ದುರಸ್ತಿ ಕಾರ್ಯ ಹಮ್ಮಿಕೊಂಡ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ವಿದ್ಯುತ್ ಪರಿವರ್ತಕಗಳಿಗೆ (ಗ್ರಿಡ್) ಪೂರೈಕೆಯಾಗುವ ವಿದ್ಯುತ್ ಸ್ಥಗಿತಗೊಳ್ಳುವ ಕಾರಣ ಸೆ. 13ರಂದು ಬೆಳಗ್ಗೆ 10ರಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆಯಾಗುವುದಿಲ್ಲ. ತಾಲೂಕಿನ ಕುಮ್ಮೂರು, ಶಿಡೇನೂರು, ಅರಬಗೊಂಡ, ಹಂಸಭಾವಿ ಗ್ರಿಡ್ಗಳ ವ್ಯಾಪ್ತಿಯ ರೈತರು, ಸಾರ್ವಜನಿಕರು ಸಹರಿಸಬೇಕು ಎಂದು ಹೆಸ್ಕಾಂ ಇಂಜಿನಿಯರ್ ಹಾಲೇಶ ಅಂತರವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.