ಭಟ್ಕಳ: ನಾಮಧಾರಿ ಸಮಾಜದ ಗುರುಮಠ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪುನರ್‌ಪ್ರತಿಷ್ಠಾಪನ ವರ್ಧಂತಿ ಹಾಗೂ ಪಾಲಕಿ ಮಹೋತ್ಸವ ಫೆ. 2ರಿಂದ 5ರವರೆಗೆ ನಡೆಯಲಿದೆ ಎಂದು ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ ಹೇಳಿದರು.
ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 2ರಂದು ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ವೆಂಕಟರಮಣ ದೇವರ 8ನೇ ಪುನರ್ ಪ್ರತಿಷ್ಠಾಂಗದ ವರ್ಧಂತಿ ಮಹೋತ್ಸವ, 3ರಂದು ಸಂಜೆ 7 ಗಂಟೆಗೆ ಶ್ರೀ ಪದ್ಮಾವತಿ ಅಮ್ಮನವರ ಪಾಲಕಿಯ ಆಗಮನ, 4ರಂದು ಬೆಳಗ್ಗೆ ವಿವಿಧ ಪೂಜೆ, ಹೋಮ ಹಾಗೂ ತುಲಾಭಾರ ಸಮರ್ಪಣೆ. 10.30ಕ್ಕೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ, 1 ಗಂಟೆಗೆ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. 3.30ರಿಂದ ದೇವರ ಪಾಲಕಿ ಮೆರವಣಿಗೆ, ರಾತ್ರಿ 11 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ ಎಂದರು.
ಕೃಷ್ಣ ನಾಯ್ಕ ಆಸರಕೇರಿ, ಪ್ರಕಾಶ ನಾಯ್ಕ, ಶಂಕರನಾಯ್ಕ, ಎಂ.ಕೆ. ನಾಯ್ಕ, ಮಹಾಬಲೇಶ ನಾಯ್ಕ, ಶ್ರೀಧರ ನಾಯ್ಕ, ವಿಠ್ಠಲ ನಾಯ್ಕ ಇತರರು ಉಪಸ್ಥಿತರಿದ್ದರು.