ಹಾದಿಗಲ್ಲು ದೇಗುಲದಲ್ಲಿ ವರ್ಧಂತಿ ಮಹೋತ್ಸವ

hadigallu
ಹಾದಿಗಲ್ಲು ಅಭಯಲಕ್ಷ್ಮೀ ನೃಸಿಂಹ ದೇವರು
Published on

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಹಾದಿಗಲ್ಲು ಅಭಯಲಕ್ಷ್ಮೀ ನೃಸಿಂಹ ದೇವಾಲಯದ ವರ್ಧಂತಿ ಮಹೋತ್ಸವ ಅಂಗವಾಗಿ ಏ.30 ಹಾಗೂ ಮೇ 1ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

30ರಂದು ಬೆಳಗ್ಗೆ ಅಭಯಲಕ್ಷ್ಮೀ ನೃಸಿಂಹ ದೇವರಿಗೆ ವರ್ಧಂತಿ ಬ್ರಹ್ಮಕಲಶಾಭಿಷೇಕ, ನರಸಿಂಹ ಮಂತ್ರಹೋಮ, ವಾಯುಸ್ತುತಿ ಹೋಮ, ಮಹಾಪೂಜೆ, ಸಂಜೆ ನಾರಾಯಣ ಭೂತರಾಜರ ಮಹಾಬಲಿ ಪೂಜೆ, ಆಶ್ಲೇಷಾ ಬಲಿ, ದೀಪ ನಮಸ್ಕಾರ ನೆರವೇರಲಿದೆ. ಮೇ 1ರ ಬೆಳಗ್ಗೆ ನಾಗದೇವರಿಗೆ ಕಲಾತತ್ವಾಭಿಷೇಕ, ನವಗ್ರಹ ಹೋಮ, ನವಚಂಡಿಕಾ ಹೋಮ, ಮಹಾಪೂಜೆ, ಸಂಜೆ ಮಹಾರಂಗಪೂಜೆ ಜರುಗಲಿದೆ.
ಸಾಹಿತ್ಯ-ಸಂಸ್ಕೃತಿ ಉತ್ಸವದಲ್ಲಿ 30ರ ಸಂಜೆ 5ಕ್ಕೆ ಕಗ್ಗಲಿ ಗಜಾನನ ಭಜನಾ ಮಂಡಳಿಯಿಂದ ಭಜನೆ, 7ಕ್ಕೆ ಕಲಾಭಾರತಿ ಕಾರಣಗಿರಿಯ ಆರತಿ ಮಹೇಶ್ ನಲ್ಲುಂಡೆ ತಂಡದವರಿಂದ ಭರತನಾಟ್ಯ, 1ರಂದು ಬೆಳಗ್ಗೆ 10.30ಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳ ಸಾನ್ನಿಧ್ಯದಲ್ಲಿ ಭಜನಾ ಸಾಧಕರಿಗೆ ವಾದಿರಾಜಾನುಗ್ರಹ ಪ್ರಶಸ್ತಿ ಪ್ರದಾನ ನಡೆಯಲಿದೆ. ಬಳಿಕ ಶ್ರೀಗಳು ಅನುಗ್ರಹ ಸಂದೇಶ ನೀಡಲಿದ್ದಾರೆ. ಇದೇ ವೇಳೆ ಕೋಟೇಶ್ವರದ ನಾದೋಪಾಸನ ತಂಡದವರು ರವೀಂದ್ರ ಐತಾಳ್ ನೇತೃತ್ವದಲ್ಲಿ ಭಜನೆ ನಡೆಸಿಕೊಡಲಿದ್ದಾರೆ.
ಸಂಜೆ 5.30ಕ್ಕೆ ಹುಲಿಸರದ ವನದುರ್ಗಾ ಭಜನಾ ಮಂಡಳಿಯಿಂದ ಅರಳಸುರಳಿ ರಾಮಚಂದ್ರ ನೇತೃತ್ವದಲ್ಲಿ ಭಜನೆ, ಸಂಜೆ 7ಕ್ಕೆ ಮಂಗಳೂರಿನ ಕುರಿಯ ವಿಠಲ ಶಾಸ್ತ್ರಿ ಯಕ್ಷ ಬಳಗದಿಂದ ಮಕರಾಕ್ಷ ಕಾಳಗ-ರಾವಣ ವಧೆ ಯಕ್ಷಗಾನ ಪ್ರದರ್ಶನವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net