

ಚಿತ್ರದುರ್ಗ: ಬುರುಜನಹಟ್ಟಿ ಉಪ್ಪು ನೀರು ಬಾವಿ ಬಳಿಯ ಮಲೆನಾಡ ಶ್ರೀಚೌಡೇಶ್ವರಿ ಸನ್ನಿಧಿಯಲ್ಲಿ ಮಂಗಳವಾರ ದೇವಿಯ ವರ್ಧಂತಿ ಮಹೋತ್ಸವದ ಅಂಗವಾಗಿ ಹೊಂಬಾಳೆ, ತೆಂಗಿನ ಗರಿ, ಹಲವು ಪುಷ್ಪಗಳಿಂದ ವಿಶೇಷ ಅಲಂಕಾರ ಸೇವೆಯೊಂದಿಗೆ ಪೂಜಾ ಕೈಂಕರ್ಯಗಳು ಜರುಗಿತು.
ನೂತನ ಶಿಲಾ ವಿಗ್ರಹ ಪ್ರತಿಷ್ಠಾಪನೆಯ 2ನೇ ವಾರ್ಷಿಕೋತ್ಸವದ ಅಂಗವಾಗಿ ದೇವಿಗೆ ಮುಂಜಾನೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ ಸೇರಿ ಇತರೆ ಪೂಜೆಗಳು ನೆರವೇರಿದವು. ಭಕ್ತರು ದೇಗುಲಕ್ಕೆ ಭೇಟಿ ನೀಡಿ ಮಂಡ್ಲಕ್ಕಿಯೊಂದಿಗೆ ಭಕ್ತಿ ಸಮರ್ಪಿಸಿದರು. ದರ್ಶನ ಪಡೆದು ಪುನೀತರಾದರು. ಮಹಾ ಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು ಎಂದು ದೇಗುಲ ಸೇವಾ ಸಮಿತಿ ತಿಳಿಸಿದೆ.