ಶಾಂತಲಿಂಗ ಶ್ರೀಗಳ ವರ್ಧಂತಿ ಮಹೋತ್ಸವ ನಾಳೆ

16 vikram 16
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ 91ನೇ ವರ್ಧಂತಿ ಮಹೋತ್ಸವ ಆ. 18ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ.
ಆದರ್ಶ ಶಿಕ್ಷಕರಾಗಿದ್ದ ದಿ.ವೀರಯ್ಯ ಯರಗಂಬಳಿಮಠ ಹಾಗೂ ದಿ.ಈರಮ್ಮ ಯರಗಂಬಳಿಮಠ ಸ್ಮರಣೆಯಲ್ಲಿ ಗುರುಮೂರ್ತಿ ಯರಗಂಬಳಿಮಠ, ಅಧ್ಯಾಪಕಿ ಪ್ರೇಮಾ ರುದ್ರಾಪುರ (ಗುಡಿ), ಖಾದಿ ಕಾರ್ಯಕರ್ತ ಬಿ.ಸಿ. ಕೊಳ್ಳಿ, ಸುನೀಲ ಗುಡಿ, ಪವನಕುಮಾರ ಕುಸುಗಲ್ಲ, ಹಾರೋಬೆಳವಡಿ ಗ್ರಾಮದ ವಿರೂಪಾಪ್ಪ ಜಕ್ಕಣ್ಣವರ ಹಾಗೂ ರಾಮಣ್ಣ ಜಕ್ಕಣ್ಣವರ, ಬಸಪ್ಪ ಉಗರಗೋಳ ಅವರಿಂದ ಸಕ್ಕರೆ, ಬೆಲ್ಲ, ಅಕ್ಕಿ ಹಾಗೂ ತೆಂಗಿನಕಾಯಿಗಳ ತುಲಾಭಾರ ಸೇವೆಗಳು ನಡೆಯಲಿವೆ.
ಆದಿಶಕ್ತಿಯ ಸ್ವರೂಪಿಗಳಾದ 108 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಲಿದೆ. ಸಮಾರಂಭದ ಅಂಗವಾಗಿ ಅಮ್ಮಿನಬಾವಿ ಗ್ರಾಪಂ ಮಾಜಿ ಅಧ್ಯಕ್ಷ ದಿ.ಬಸಯ್ಯ ಗುಡಿ ಸ್ಮರಣೆಯಲ್ಲಿ ಅಬಕಾರಿ ಇಲಾಖೆ ಸಿಪಿಐ ಅಮೃತ ಗುಡಿ ಅವರಿಂದ ದಾಸೋಹ ಸೇವೆ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net