

ಧಾರವಾಡ: ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶನದಂತೆ ಜಿಲ್ಲಾಡಳಿತವು ವರಮಹಾಲಕ್ಷಿ÷್ಮÃ ವ್ರತದ ಅಂಗವಾಗಿ ಆಯೋಜಿಸಿರುವ, ಜಿಲ್ಲೆಯ ಅಽಸೂಚಿತ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಅರಿಷಿನ ಕುಂಕುಮ ನೀಡಿ, ಉಡಿ ತುಂಬುವ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ. ನಗರದ ದುರ್ಗಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಮಹಿಳೆಯರಿಗೆ ಉಡಿ ತುಂಬುವ ಮೂಲಕ ಚಾಲನೆ ನೀಡಿದರು.
ಇಲ್ಲಿನ ಕಿಲ್ಲಾದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಜಿಲ್ಲಾಡಳಿತ, ಧಾರ್ಮಿಕ ದತ್ತಿ ಇಲಾಖೆ ಹಾಗೂ ತಾಲೂಕು ಆಡಳಿತ ಜಂಟಿಯಾಗಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಆಯೋಜಿಸಲಾಗಿತ್ತು.
ಉತ್ತಮ ಮಳೆ ಬೆಳೆ ಬರಲಿ, ಜನರ ಸುಖ ಸಮೃದ್ಧಿ ಹೆಚ್ಚಿ ಎಲ್ಲರಿಗೂ ಸಂತೋಷದ ಬದುಕು ಕರುಣಿಸಲಿ ಎಂದು ಪ್ರಾರ್ಥಿಸಿ, ಜಿಲ್ಲಾಡಳಿತದ ಪರ ದೇವಿಗೆ ಸಕಲ ಮಂಗಲಾಷ್ಟಕಗಳನ್ನು ಒಳಗೊಂಡ ಉಡಿ ಅರ್ಪಿಸಿದರು.
ದೇವಸ್ಥಾನಕ್ಕೆ ಆಗಮಿಸಿದ್ದ ಮಹಿಳೆಯರಿಗೆ ಕಂಕಣ ಕಟ್ಡಿ, ಅರಿಷಿನ ಕುಂಕುಮ ಹಚ್ಚಿ, ಹೂವು ತೊಡಿಸಿ, ಹಸಿರು ಬಳೆ, ಹಣ್ಣು, ಕಣ, ತಾಂಬೂಲದೊAದಿಗೆ ಉಡಿ ತುಂಬಿದರು.
ತಹಸೀಲ್ದಾರ್ ದೊಡ್ಡಪ್ಪ ಹೂಗಾರ, ಶಿರಸ್ತೇದಾರ ಪ್ರವೀಣ ಪೂಜಾರ, ಕಂದಾಯ ನಿರೀಕ್ಷಕ ಗುರು ಸುಣಗಾರ, ದೇವಸ್ಥಾನದ ಅರ್ಚಕರಾದ ಗಣೇಶ ಪೂಜಾರ, ಮಂಜುನಾಥ ಪೂಜಾರ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.