ಶ್ರದ್ಧಾ ಭಕ್ತಿಯಿಂದ ದೇವಿ ಆರಾಧನೆ

mkg1a
Published on

ಬಸವಾಪಟ್ಟಣ: ಶ್ರಾವಣ ಮಾಸ ಎಂದರೆ ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಸಂಭ್ರಮ ನೀಡುವ ವ್ರತಗಳ ಪರ್ವ ಕಾಲ. ವ್ರತಗಳ ಆಚರಣೆಯಿಂದ ತಮಗೆ ಇರುವ ಕಂಟಕಗಳು ದೂರವಾಗಿ ಕಾಯ ವಾಚ ಮನಸ ಶುದ್ದಿಯಾಗಿ ನಮ್ಮ ಜೀವನ ವೃದ್ಧಿಯಾಗುತ್ತದೆ ಎನ್ನುವುದು ನಂಬಿಕೆ.

ಅಂತಹ ವ್ರತಗಳಲ್ಲಿ ಒಂದಾದ ವರ ಮಹಾಲಕ್ಷ್ಮೀ ಹಬ್ಬವನ್ನು ಶುಕ್ರವಾರ ಬಸವಾಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಹಿಳೆಯರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಬೆಟ್ಟದ ಮೇಲಿರುವ ದುರ್ಗಾಂಬಿಕಾ ದೇವಿ ಹಾಗೂ ಸಮೀಪದ ಚಿರಡೋಣಿಯ ಶ್ರೀ ಕಾಳಿಕಾದೇವಿ ಹಾಗೂ ಬನಶಂಕರಿ ದೇವಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನಗಳು ನಡೆದವು. ಎಲ್ಲರ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net