ಸಂಪ್ರದಾಯ ರೀತಿಯಲ್ಲಿ ವರಮಹಾಲಕ್ಷ್ಮೀ ಹಬ್ಬ ಆಚರಣೆ

25-ANP-P2
ಆನಂದಪುರದ ದಿ.ದಕ್ಷಿಣಾಮೂರ್ತಿ ಕುಟುಂಬಸ್ಥರು ವರಮಹಾಲಕ್ಷ್ಮೀ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
Published on

ಆನಂದಪುರ: ಸುತ್ತಮುತ್ತಲ ಗ್ರಾಮಗಳಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು.

ಹಬ್ಬದ ಮುನ್ನಾ ದಿನವಾದ ಗುರುವಾರ ಸಂಜೆಯೇ ಮನೆ ಮಂದಿಯೆಲ್ಲ ಸೇರಿ ತಳಿರು-ತೋರಣ ಕಟ್ಟಿ ವರಮಹಾಲಕ್ಷ್ಮೀ ಸ್ವಾಗತಕ್ಕೆ ಅಣಿಯಾಗಿದ್ದರು. ಕಲಶ ಸ್ಥಾಪಿಸಿ, ವಿಶೇಷ ಮಂಟಪ ನಿರ್ಮಿಸಿ ಅಲಂಕರಿಸಿದ್ದರು.
ದೇವಿಗೆ ಹೊಸ ವಸ್ತ್ರ, ಆಭರಣ, ಹೂವಿನ ಅಲಂಕಾರ ಮತ್ತು ವಿಶೇಷ ನೈವೇದ್ಯ ತಯಾರಿಸಿದ್ದರು. ಸ್ನೇಹಿತರು, ಆಪ್ತರು, ಬಂಧುಗಳನ್ನು ಕರೆದು ಪ್ರಸಾದ ವಿತರಿಸಿದರು. ಸುಮಂಗಲಿಯರಿಗೆ ಬಾಗಿನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net