

ಭದ್ರಾವತಿ: ವರಮಹಾಲಕ್ಷ್ಮೀ ಹಬ್ಬವನ್ನು ಶುಕ್ರವಾರ ತಾಲೂಕಿನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಮಹಿಳೆಯರು ಶ್ರದ್ಧಾಭಕ್ತಿಯಿಂದ ದೇವಿಗೆ ಪೂಜೆ ಸಲ್ಲಿಸಿದರು.
ಗುರುವಾರ ರಾತ್ರಿಯಿಂದಲೇ ಮನೆಗಳಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸುವ ಸಲುವಾಗಿ ತಯಾರಿ ನಡೆಸಿದ ಗೃಹಿಣಿಯರು ಅಲಂಕೃತ ಲಕ್ಷ್ಮೀ ವಿಗ್ರಹಕ್ಕೆ ಶುಕ್ರವಾರ ಬೆಳಗ್ಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಮನೆಯಲ್ಲಿಯೇ ತಯಾರಿಸಿದ ವಿವಿಧ ತಿಂಡಿಗಳನ್ನು ದೇವಿಗೆ ನೈವೇದ್ಯದಾರತಿ ಮಾಡಿದರು.
ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ, ಮನೆಯ ಸದಸ್ಯರೆಲ್ಲರೂ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ನೆರೆಹೊರೆಯವರನ್ನು ಕರೆದು ಅರಿಶಿಣ, ಕುಂಕುಮ ನೀಡಿ ಶುಭ ಹಾರೈಸಿದರು.