ಮುಸ್ಲಿಂಮರಿಂದ ವರಮಹಾಲಕ್ಷ್ಮೀ ಪೂಜೆ

Untitled design
ಅಳವಂಡಿ ಗ್ರಾಮದ ನಜರುದ್ದೀನ ಬಿಸರಳ್ಳಿ ಅವರ ಮನೆಯಲ್ಲಿ ವರಮಹಾಲಕ್ಷ್ಮೀಯನ್ನು ಪ್ರತಿಷ್ಟಾಪಿಸಿ ವಿಶೇಷ ಪೂಜೆ ಸಲ್ಲಿಸಿರುವುದು.
Published on

ಅಳವಂಡಿ: ಗ್ರಾಮದ ಮುಸ್ಲಿಂ ಕುಟುಂಬ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಗಮನ ಸೆಳೆದಿದೆ. ಗ್ರಾಮದ ನಜರುದ್ದೀನ ಬಿಸರಳ್ಳಿ ಕುಟುಂಬವು ಐದು ವರ್ಷಗಳಿಂದ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಿಕೊಂಡು ಬಂದಿದೆ.

ಹಿಂದು ಸಂಪ್ರದಾಯದಂತೆ ಆಚರಣೆ

ಹಿಂದು ಸಂಪ್ರದಾಯದಂತೆ ಮನೆಯನ್ನು ತಳಿರು-ತೋರಣ, ವಿದ್ಯುತ್ ದೀಪಗಳು, ಹೂಗಳಿಂದ ಅಲಂಕರಿಸಿ ವರಮಹಾಲಕ್ಷ್ಮೀ ವಿಶೇಷವಾಗಿ ಪೂಜಿಸಿದರು. ಸರ್ವಧರ್ಮದವರನ್ನು ಹಾಗೂ ಬಂಧು ಬಳಗವನ್ನು ಮನೆಗೆ ಆಹ್ವಾನಿಸಿ ಭಾವೈಕ್ಯತೆ ಮೆರೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net