

ಕಂಪ್ಲಿ: ಇದ್ದವರ ಮತ್ತು ಇಲ್ಲದವರ ನಡುವೆ ಬ್ಯಾಂಕ್ ಸೇತುವೆಯಾಗಿ ಉಭಯರ ಅಭಿವೃದ್ಧಿಗೆ ಪಣ ತೊಡಬೇಕು ಎಂದು ಎಮ್ಮಿಗನೂರಿನ ಹಂಪಿಸಾವಿರದೇವರ ಮಠದ ವಾಮದೇವ ಶಿವಾಚಾರ್ಯ ಹೇಳಿದರು.
ಇಲ್ಲಿನ ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘದ 22ನೇ ಮಹಾಜನ ಸಭೆಗೆ ಭಾನುವಾರ ಚಾಲನೆ ನೀಡಿ, ಮಾತನಾಡಿದರು. ಬ್ಯಾಂಕ್ ಆರ್ಥಿಕವಾಗಿ ಹಿಂದುಳಿದವರ ಬಾಳಿಗೆ ದೀವಿಗೆಯಾಗಬೇಕು. ಹಣ, ಕ್ಷಣ ವ್ಯರ್ಥಗೊಳಿಸಿದರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಎಚ್.ಜಗದೀಶ ಮಾತನಾಡಿ, ಸಂಘದಲ್ಲಿ 12,457ಸದಸ್ಯರಿದ್ದು, 8.09ಕೋಟಿ ರೂ. ಶೇರು ಬಂಡವಾಳ, 15.77ಕೋಟಿ ರೂ.ಗಳ ನಿಧಿ, 75.61ಕೋಟಿ ರೂ.ಗಳ ಠೇವಣಿ ಹೊಂದಿದೆ. 83.49ಕೋಟಿ ರೂಪಾಯಿಗಳ ಸಾಲ ವಿತರಣೆಯಾಗಿದ್ದು, ಶೇ.90.50ರಷ್ಟು ಸಾಲ ವಸೂಲಾತಿಯಾಗಿದೆ. 4.13ಕೋಟಿ ರೂ.ಗಳ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.24ರಷ್ಟು ಲಾಭಾಂಶ ವಿತರಿಸಲಾಗುವುದು ಎಂದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ರಾಷ್ಟ್ರೀಯ ವಕ್ತಾರರಾಗಿ ಆಯ್ಕೆಗೊಂಡ ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರನ್ನು, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು, ನಾನಾ ಕ್ಷೇತ್ರಗಳಲ್ಲಿನ ಸಾಧಕರನ್ನು ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಟಿ.ಕೊಟ್ರೇಶ್, ನಿರ್ದೇಶಕರಾದ ಎಚ್.ಮಂಜುನಾಥ, ಡಿ.ವೀರಪ್ಪ, ವಾಲಿ ಕೊಟ್ರಪ್ಪ, ಕೆ.ಸಣ್ಣಗವಿಸಿದ್ದಪ್ಪ, ಚಂದ್ರಶೇಖರಪ್ಪ ಬಣಗಾರ, ಜಿ.ವೀರನಗೌಡ, ಕಾರೆ ಪಂಪಾಪತಿ, ಕವಿತಾಳ ಚನ್ನಪ್ಪ, ಡಾ.ವೀರನಗೌಡ ಎಸ್.ಪಾಟೀಲ್, ಕೆ.ಉಷಾರಾಣಿ, ಸಿ.ಎಚ್.ಪಕ್ಕೀರಪ್ಪ, ಎನ್.ಯಂಕಪ್ಪ, ಎನ್.ಅಯ್ಯಪ್ಪ, ಮುಖ್ಯಕಾರ್ಯನಿರ್ವಾಹಕರಾದ ಎಂ.ಲೋಕೇಶ್ವರರೆಡ್ಡಿ, ಎನ್.ವೀರೇಶ್, ಆರ್.ಮಂಜು, ಪಿ.ವರ್ಷಿಣಿ, ಎಚ್.ಬೀರಪ್ಪ, ಬಿ.ಶಿವಪ್ಪ ಇತರರಿದ್ದರು.