ಸಂತೆಕಟ್ಟೆ ಪೈಪ್ ಶೆಡ್ ನಲ್ಲಿ ಬೆಂಕಿ ಅವಘಡ

IMG-20231017-WA0039
Published on

ಉಡುಪಿ: ಸಂತೆಕಟ್ಟೆ ಪಕ್ಕಿಬೆಟ್ಟು ರಸ್ತೆಯ ವಾರಾಹಿ ಕುಡಿಯುವ ನೀರಿನ ಯೋಜನೆಯ ಶೆಡ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಇದರಿಂದ ಲಕ್ಷಾಂತರ ಮೌಲ್ಯದ ಪೈಪುಗಳು ಸುಟ್ಟು ಕರಕಲಾಗಿವೆ.

ಮಂಗಳವಾರ ಸಂಜೆ ವೇಳೆ ಶೆಡ್ ನಲ್ಲಿ ಆಕಸ್ಮಿಕವಾಗಿ ಬೆಂಕಿ‌ ಕಾಣಿಸಿಕೊಂಡಿದ್ದು, ಬೆಂಕಿ ಕೆನ್ನಾಲಿಗೆ ಇಡೀ‌ ಶೆಡ್‌ಗೆ ವಿಸ್ತರಿಸಿತು. ಇದರಿಂದ ಶೆಡ್ ನಲ್ಲಿದ್ದ ವಾರಾಹಿ ಕುಡಿಯುವ ನೀರಿಗೆ ಸಂಬಂದಿಸಿದ ಪೈಪ್‌ ಹಾಗೂ ಇನ್ನಿತರ ಪರಿಕರಗಳು ಸಂಪೂರ್ಣ ಸುಟ್ಟು ಹೋಗಿವೆ.

ಇದೇ ಶೆಡ್ ನಲ್ಲಿ 60ಕ್ಕೂ ಅಧಿಕ‌ ಕಾರ್ಮಿಕರ ಕುಟುಂಬಗಳು ವಾಸಿಸುತ್ತಿದ್ದು ಅವಘಡ ಸಂದರ್ಭ ಕಾರ್ಮಿಕರು ಹೊರಗಡೆ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಉಡುಪಿ ಅಗ್ನಿಶಾಮಕ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಎರಡು ವಾಹನಗಳಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net