ಸಂಪ್ರದಾಯ ಉಡುಪು ಧರಿಸಿ ವರಾಹಸ್ವಾಮಿ ದೇವಸ್ಥಾನಕ್ಕೆ ಬನ್ನಿ

udp-varaha
Published on

ಕುಂದಾಪುರ: ಅರಬ್ಬಿ ಸಮುದ್ರ, ಸೌಪರ್ಣಿಕಾ ನದಿ ನಡುವೆ ಸಾಗುವ ರಾಷ್ಟ್ರೀಯ ಹೆದ್ದಾರಿ ಪ್ರವಾಸೋದ್ಯಮಕ್ಕೆ ವಿಶ್ವಮಾನ್ಯತೆ ಕೊಟ್ಟರೆ, ಮಳೆ ದೇವರು ಮರವಂತೆ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನ ಧಾರ್ಮಿಕ ಶ್ರದ್ಧಾಳುಗಳ ಪರವಶ ಕೇಂದ್ರ. ಮರವಂತೆ ಕಡಲ ತೀರಕ್ಕೆ ದೇವಸ್ಥಾನ ಧಾರ್ಮಿಕ ಟಚ್ ನೀಡಿದೆ.

ಸಮುದ್ರ, ಪಶ್ಚಿಮ ಘಟ್ಟ, ನದಿ, ಸುತ್ತಮುತ್ತಲು ಹಸಿರು ಪ್ರಕೃತಿ ನಡುವೆ ಇರುವ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ನಡೆಯುವ ಕರ್ಕಾಟಕ ಅಮವಾಸ್ಯೆಗೆ ವಿಶೇಷತೆಯಿದ್ದು, ಮಳೆಗಾಲದಲ್ಲಿ ನಡೆಯುವ ಉಡುಪಿ ಜಿಲ್ಲೆ ಮೊದಲ ಜಾತ್ರೋತ್ಸವ! ಕೋಟೇಶ್ವರ ಕೊಡಿ ಹಬ್ಬ ಜಿಲ್ಲೆ ಮೊದಲ ಜಾತ್ರೆಯಾಗಿದ್ದು, ಮಳೆಗಾಲ ಹಾಗೂ ಬೇಸಿಗೆ ಕಾಲದ ಜಾತ್ರ್ರೆಗೆ ಮುನ್ನುಡಿ ಬರೆಯುವುದು ಉಡುಪಿ ಜಿಲ್ಲೆ.

ಜು.೨೮, ಕರ್ಕಾಟಕ ಅಮಾವಾಸ್ಯೆ ನಡೆಯಲಿದ್ದು, ೫೦ ಸಾವಿರ ಜನ ಸೇರುವ ಬೃಹತ್ ಜಾತ್ರೆಗೆ ಸಕಲ ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ. ಕರಾವಳಿ ಜನರ ಆರಾಧ್ಯ ದೇವರು, ನಂಬಿದ ಭಕ್ತರ ವರ ನೀಡುವ ವರಾಹ ಸ್ವಾಮಿ ದೇಗುಲಕ್ಕೆ ಜಾತ್ರೆ ದಿನದಂದು ಮುಂಜಾನೆಯಿಂದಲೇ ಭಕ್ತರ ಆಗಮನ ಆರಂಭವಾಗುತ್ತದೆ. ಸಮುದ್ರ ಮತ್ತು ನದಿಗಳಲ್ಲಿ ಸ್ನಾನ ಮಾಡಿ, ಶ್ರೀ ವರಾಹ, ಶ್ರೀ ಗಂಗಾಧರೇಶ್ವರ ದೇವರಿಗೆ ಅಭಿಷೇಕ, ಸಲ್ಲಿಸಿ, ತೀರ್ಥ, ಪ್ರಸಾದ ಸ್ವೀಕರಿಸಿ ದೇವರಿಗೆ ಕೃತಜ್ಞತೆ ಸಲ್ಲಿಸಿ ತೆರಳುತ್ತಾರೆ. ಮರವಂತೆ ಮಾರಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಕರ್ಕಾಟಕ ಅಮವಾಸ್ಯೆಗೆ ಅದರದ್ದೇ ಆದ ಪ್ರತ್ಯೇಕತೆ ಇದೆ.

ದೇವಸ್ಥಾನಗಳು ಧಾರ್ಮಿಕ ಹಾಗೂ ಸಂಸ್ಕೃತಿಕ ಕೇಂದ್ರವಾಗಿದ್ದು, ಇಲ್ಲಿ ಭಕ್ತಯೇ ಪ್ರಧಾನ ಆಗಿರುತ್ತದೆ. ಬರುವ ಭಕ್ತರು ಭಯಭಕ್ತಿಯಿಂದ ಮನಸ್ಸಿನ ವಿಚಲಿತ ಮಾಡಿಕೊಳ್ಳದೆ ದೇವರ ಸೇವೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ವಸ್ತ್ರ ಸಂಹಿತೆ ಜಾರಿಗೆ ತಂದಿದ್ದು, ಬೀಚಿಗೆ ಬಂದವರು ಆಧುನಿಕ ಉಡುಪಲ್ಲೇ ದೇವಸ್ಥಾನಕ್ಕೆ ಬರುವುದು ಕಂಟ್ರೂಲ್ ಮಾಡುವ ಉದ್ದೇಶವಿದೆ. ಸಂಪ್ರದಾಯಕ ಉಡುಪು ಧರಿಸಿ ದೇವಸ್ಥಾನಕ್ಕೆ ಭಕ್ತರು ಬರುವಂತೆ ವಸ್ತ್ರ ಸಂಹಿತೆ ತರಲಾಗಿದೆ. ಮುಂದಿನ ದಿನದಲ್ಲಿ ದೇವಸ್ಥಾನದಲ್ಲೇ ಪುರುಷ, ಮಹಿಳೆಯರಿಗೆ ಸಂಪ್ರದಾಯಕ ಉಡುಪು ಇಡಲಾಗುತ್ತದೆ. ಸಮುದ್ರ ಅಲೆ ಅಬ್ಬರ, ಸೌಪರ್ಣಿಕಾ ನದಿ ನೀರಿನ ಮಟ್ಟ ಹೆಚ್ಚಿರುವುದರಿಂದ ಅನಾಹುತಕ್ಕೆ ಅವಾಕಾಶ ಆಗಬಾರುದು ಎನ್ನುವ ನಿಟ್ಟಿನಲ್ಲಿ ಬಂದೋಬಸ್ತು ಹಾಗೂ ಜಾತ್ರೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ವರಾಹ ಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ.ನಾಯಕ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net