ವರಾಹಚಕ್ರಂ' ಸಿನಿಮಾ ಶೀಘ್ರ ತೆರೆಗೆ

26 Dwd 1
Published on

ಧಾರವಾಡ:ವರಾಹಚಕ್ರಂ' ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಜೂನ್‌ನಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದು ನಿರ್ದೆಶಕ ಮಂಜುನಾಥ ಮಸ್ಕಲಮಟ್ಟಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಟಿ ಪ್ರೇಮಾ, ಸುಮನ್ ಇತರರು ನಟಿಸಿದ್ದಾರೆ. ಜೊತೆಗೆ ಹೊಸಬರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದೆ. ಕಾಶಿ, ವಾರಾಣಸಿಯಲ್ಲಿ ಶೂಟಿಂಗ್ ಮಾಡಲಾಗಿದೆ ಎಂದರು.
ನಟಿ ಪ್ರೇಮಾ ಮಾತನಾಡಿ, ಚಿತ್ರದಲ್ಲಿ ಗಾಯಕಿ ಆಗಿ ನಟನೆ ಮಾಡಿದ್ದೆ. ಡಾ. ನಾಗೇಂದ್ರ ಪ್ರಸಾದ್ ಗೀತರಚನೆಯ ದೇಶಭಕ್ತಿ ಗೀತೆಯನ್ನು ಇದೇ ಮೊದಲ ಬಾರಿ ಹಾಡಿದ್ದೇನೆ. ಪೂರ್ತಿ ಕಥೆ ಕೇಳಿದಾಗ ಒಂದು ರೀತಿ ಸೂರ್ತಿಯÁಯಿತು. ನಾನು ಹಿಂದೆ ಮಾಡಿದ ಎಲ್ಲ ಪಾತ್ರಗಳಿಗಿಂತ ವಿಭಿನ್ನವಾಗಿದೆ ಎನಿಸಿ ಚಿತ್ರ ಒಪ್ಪಿದೆ. ಈ ಸಿನಿಮಾ ನಿರ್ದೇಶಕರ ಕನಸು. ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಸಂಗೀತ ಸಂಯೋಜನೆಯ ಜೊತೆ ಪ್ರಮುಖ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನೃತ್ಯ ಸಂಯೋಜಕ ತ್ರಿಭುವನ್ ಮÁಸ್ಟರ್, ನಟರಾದ ಶಶಿ ಆನಂದ್, ಇಮÁ್ರನ್, ನಿಶಾ ರಜಪೂತ, ದೀಕ್ಷಾ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net