

ಕುಂದಾಪುರ: ಬೈಂದೂರು ತಾಲೂಕಿನ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ವರಾಹ ಜಯಂತಿ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ನಡೆಯಿತು.
ಶ್ರೀ ವರಾಹ, ಶ್ರೀ ವಿಷ್ಣು, ಶ್ರೀ ನಾರಸಿಂಹ ದೇವರಿಗೆ ಅಲಂಕಾರ ಪೂಜೆ, ವರಾಹ ಹೋಮ, ಹಣ್ಣು ಕಾಯಿ ಮತ್ತು ಮಂಗಳಾರತಿ ಸೇವೆ ನಡೆಯಿತು. ಬಳಿಕ ಭಜನಾ ಕಾರ್ಯಕ್ರಮ ಜರುಗಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ ಹೆಬ್ಬಾರ ಮತ್ತು ಸದಸ್ಯರು, ಅರ್ಚಕರು, ಉಪಾದಿವಂತರು, ನೌಕರ ವೃಂದವರು, ಗ್ರಾಮಸ್ಥರು, ಭಕ್ತರು ಉಪಸ್ಥಿತರಿದ್ದರು.