4.36 ಲಕ್ಷ ರೂ. ಮೌಲ್ಯದ ಬಾಂದಾರದ ಗೇಟ್​ಗಳ ಕಳ್ಳತನ

Crime Logo
Published on

ಹಾನಗಲ್ಲ: ಬಾಂದಾರಕ್ಕೆ ಅಳವಡಿಸುವ 4.36 ಲಕ್ಷ ರೂ. ಮೌಲ್ಯದ 208 ಕಬ್ಬಿಣದ ಗೇಟ್​ಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಶೇಷಗಿರಿ ಗ್ರಾಮದ ಬ್ಯಾರೇಜ್​ ಪಕ್ಕದ ಗೋದಾಮಿನಲ್ಲಿ ಶನಿವಾರ ನಡೆದಿದೆ.

ಈ ಕುರಿತು ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಉಪ ವಿಭಾಗದ ಸಹಾಯಕ ಇಂಜಿನಿಯರ್​ ಕಾಂತಪ್ಪ ಹಿತ್ತಲಮನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಗೋದಾಮಿನಲ್ಲಿ ಬಾಂದಾರಕ್ಕೆ ಹಾಕುವ ಗೇಟ್​ಗಳನ್ನು ಇಡಲಾಗಿತ್ತು. ಯಾರೋ ಖದೀಮರು ಗೋದಾಮಿನ ಶೆಟ್ರೆಸ್​ಅನ್ನು ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಮಳೆ ಹಿನ್ನೆಲೆಯಲ್ಲಿ ಬಾಂದಾರಕ್ಕೆ ಗೇಟ್​ ಹಾಕುವ ಸಲುವಾಗಿ ನೋಡಲು ಹೋದಾಗ ಕಳ್ಳತನ ವಿಚಾರ ತಿಳಿದು ಬಂದಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಆಡೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net