

ಹಾನಗಲ್ಲ: ವರದಾ ನದಿಯಲ್ಲಿ ಬೈಕ್ ತೊಳೆಯಲು ಹೋಗಿದ್ದ ವ್ಯಕ್ತಿಯೊಬ್ಬ ನೀರಿನಲ್ಲಿ ತೇಲಿಕೊಂಡು ಹೋದ ಘಟನೆ ತಾಲೂಕಿನ ಕೂಸಗೂರ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.
ಪುನೀತ ಬಸವರಾಜ ದೊಡ್ಡಮನಿ (23) ನೀರಿನಲ್ಲಿ ತೇಲಿ ಹೋದವನು.
ಈತ ಗ್ರಾಮದ ಬಳಿಯಿರುವ ವರದಾ ನದಿಯಲ್ಲಿ ಬೈಕ್ ತೊಳೆಯಲು ಹೋದಾಗ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ತೇಲಿಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.