

ಹಾವೇರಿ: ಮಗ ಕಾಣೆಯಾಗಿದ್ದರಿಂದ ಮತ್ತು ಪತ್ನಿ ಮೃತಪಟ್ಟಿದ್ದರಿಂದ ಬೇಸತ್ತು ವೃದ್ಧರೊಬ್ಬರು ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದೇವಗಿರಿ-ಮನ್ನಂಗಿ ರಸ್ತೆ ಬಳಿ ನಡೆದಿದೆ.
ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದ ಮಾನಪ್ಪ ವೀರಪ್ಪ ಪತ್ತಾರ (82) ಮೃತ ವೃದ್ಧ.
ಇವರು ತನ್ನ ಕಿರಿಯ ಮಗ ಕಾಣೆಯಾಗಿದ್ದರಿಂದ ಮತ್ತು ಪತ್ನಿ ಕೂಡ ಮೃತಪಟ್ಟಿದ್ದರಿಂದ ಮನಸ್ಸಿಗೆ ಬೇಸರ ಮಾಡಿಕೊಂಡು ಹುಬ್ಬಳ್ಳಿಯಿಂದ ಬಸ್ ಹತ್ತಿ ಬಂದು ದೇವಗಿರಿ-ಮನ್ನಂಗಿ ರಸ್ತೆಯ ಬಳಿ ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.