

ಉಡುಪಿ: ಜಿಲ್ಲೆಯಲ್ಲಿ ವಿವಿಧ ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿಯೇ ಭಕ್ತರು ಶುಕ್ರವಾರ ವರಮಹಾಲಕ್ಷಿ$್ಮ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕೃಷ್ಣ ಮಠದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನೂರಾರು ಮಹಿಳೆಯರಿಂದ 'ಲಕ್ಷ್ಮೀ ಶೋಭಾನೆ' ಪಠಣ ನಡೆಯಿತು. ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಜಿ ಎಸ್ ಬಿ ಮಹಿಳಾ ಮಂಡಳಿಯ ವತಿಯಿಂದ ಸಾಮೂಹಿಕ ವರ ಮಹಾಲಕ್ಷ್ಮೀ ಪೂಜೆ ಜರಗಿತು. ಮಹಿಳಾ ಮಂಡಳಿಯ ಸದಸ್ಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.
ಅಂಬಲಪಾಡಿ ಲಕ್ಷ್ಮಿ ಜನಾರ್ಧನ ದೇವಸ್ಥಾನ, ಕಡಿಯಾಳಿ ಮಹಿಷಮರ್ಧಿನಿ ದೇವಳ ಸೇರಿದಂತೆ ವಿವಿಧ ದೇವಿ ದೇವಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು, ಯುವತಿಯರು ಮನೆಗಳಲ್ಲಿ ಕಲಶವಿಟ್ಟು ಲಕ್ಷ್ಮಿ ದೇವರನ್ನು ಪೂಜಿಸಿ, ಬಾಗಿನ ಸಮರ್ಪಿಸಿ, ವ್ರತಾಚರಣೆ ಮಾಡಿದರು.