ನೆಲ್ಯಾಡಿಯಲ್ಲಿ ವರಮಹಾಲಕ್ಷ್ಮೀ ಪೂಜೆ

New Project (22)
Published on

ನೆಲ್ಯಾಡಿ: ಕಾಮಧೇನು ಸಹಕಾರಿ ಸಂಘ ವತಿಯಿಂದ ಕಾಮಧೇನು ಮಹಿಳಾ ವರಲಕ್ಷ್ಮೀ ಸೇವಾ ಸಮಿತಿ ನೇತೃತ್ವದಲ್ಲಿ ಪ್ರಥಮ ವರ್ಷದ ವರಲಕ್ಷ್ಮೀ ಪೂಜೆ ಶುಕ್ರವಾರ ನಡೆಯಿತು. ಮಾಧವ ಸರಳಾಯರ ನೇತೃತ್ವದಲ್ಲಿ ಅಮೃತ್ ಸರಳಾಯ ಮತ್ತು ಮುರಳಿ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಕಡಬ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಶುಭಹಾರೈಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯರಾದ ಸೌಮ್ಯಾ, ಪ್ರವೀಣ, ಮಾಸ್ಟರ್ ಪ್ಲಾನ್‌ನ ಲೋಲಾಕ್ಷ ಕೈಕಂಬ ಮತ್ತು ಅಯ್ಯಪ್ಪ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಡಾ.ಸದಾನಂದ ಕುಂದರ್, ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮೋಹನ್ ಕಟ್ಟೆಮಜಲು ಅವರನ್ನು ಸನ್ಮಾನಿಸಲಾಯಿತು.

ಉಷಾ ಅಂಚನ್ ಸ್ವಾಗತಿಸಿದರು. ಸುಧೀರ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ತಿರ್ಲೆ ಶ್ರೀ ಮಹಾವಿಷ್ಣು ಮಹಿಳಾ ಭಜನಾ ಮಂಡಳಿ, ಹೊಸಮಜಲು ಧರ್ಮಶ್ರೀ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಜರುಗಿತು. ಕಾಮಧೇನು ವರಲಕ್ಷ್ಮೀ ಸೇವಾ ಸಮಿತಿ ಪದಾಧಿಕಾರಿಗಳು, ಪ್ರವೀಣಿ, ದಿವ್ಯಾ ಪಿ, ಶ್ವೇತಾಕುಮಾರಿ, ರತಿ, ಚೈತನ್ಯ, ವಾರಿಜಾಕ್ಷಿ ಮತ್ತು ಸಮಿತಿ ಸದಸ್ಯರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net