

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಮಹಿಳಾ ಸಬಲೀಕರಣದಿಂದ ಸಾಮಾಜಿಕ ಪ್ರಗತಿ ಸಾಧ್ಯ ಎಂದು ಕೇರಳ ವಿಧಾನಸಭಾ ಪ್ರತಿಪಕ್ಷ ಮುಖಂಡ ವಿ.ಡಿ.ಸತೀಶನ್ ಹೇಳಿದರು.
ಎಣ್ಮಕಜೆ ಗ್ರಾಮ ಪಂಚಾಯಿತಿ ವತಿಯಿಂದ ಪೆರ್ಲ ಪೇಟೆಯಲ್ಲಿ ನಿರ್ಮಿಸಿರುವ ಮಹಿಳಾ ವಾಣಿಜ್ಯ ಸಂಕೀರ್ಣ ಉದ್ಘಾಟನೆ ಹಾಗೂ ಎಸ್‌ಸಿಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಸಿಎಸ್‌ಟಿ ವಿಭಾಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಕಾಂಗ್ರೆಸ್ ಮುಖಂಡ ಕೆ.ನೀಲಕಂಠನ್, ಎಣ್ಮಕಜೆ ಗ್ರಾ.ಪಂ. ಉಪಾಧ್ಯಕ್ಷೆ ರವ್ಲಾ ಇಬ್ರಾಹಿಂ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಗ್ರಾ.ಪಂ. ಸದಸ್ಯರಾದ ಮಹೇಶ್ ಭಟ್, ರಾಮಚಂದ್ರ, ನರಸಿಂಹ ಪೂಜಾರಿ, ಡಾ.ಜಹನಾಝ್ ಹಂಸಾರ್, ರಾಧಾಕೃಷ್ಣ ನಾಯಕ್, ಕೇರಳ ರಾಜ್ಯ ಸಣ್ಣ ಕೈಗಾರಿಕಾ ಅಸೋಸಿಯೇಶನ್ ರಾಜ್ಯ ಸಮಿತಿ ಸದಸ್ಯ ರಾಜಾರಾಮ ಎಸ್.ಪೆರ್ಲ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಎಣ್ಮಕಜೆ ಗ್ರಾಪಂ ಅಧ್ಯಕ್ಷ ಜೆ.ಎಸ್.ಸೋಮಶೇಖರ್ ಸ್ವಾಗತಿಸಿದರು. ಗ್ರಾಪಂ ಕಾರ್ಯದರ್ಶಿ ಶಾನವಾಸ್ ವಂದಿಸಿದರು.
ಬೆಲೆಯೇರಿಕೆ ಪರಿಹಾರವಲ್ಲ
ಮದ್ಯದ ಬೆಲೆ ಹೆಚ್ಚಳದಿಂದ ಮದ್ಯಪಾನಿಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಿಲ್ಲ. ಮದ್ಯದ ಬೆಲೆ ಹೆಚ್ಚಿಸಿದ ಮರುದಿನ ಕುಡಿತ ಕಡಿಮೆ ಮಾಡುವುದರ ಬದಲು, ಮತ್ತೊಂದು ಹೆಚ್ಚಿನ ಪೆಗ್ ಸೇವಿಸುವವರೇ ಸಮಾಜದಲ್ಲಿ ಹೆಚ್ಚಾಗಿದ್ದಾರೆ. ಸರ್ಕಾರದ ಮದ್ಯನೀತಿಯಿಂದ ಮಹಿಳೆಯರು ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ವಿ.ಡಿ.ಸತೀಶನ್ ತಿಳಿಸಿದರು.