ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ

New Project (4)
Published on

ಬೆಳ್ತಂಗಡಿ: ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮಹಾಸಭೆ ಭಾನುವಾರ ನಡೆಯಿತು.

ಸಂದ ಅಧ್ಯಕ್ಷ ಎಚ್.ಪದ್ಮ ಗೌಡ ಆಧ್ಯಕ್ಷತೆ ವಹಿಸಿ, 2024-25 ಸಾಲಿನಲ್ಲಿ 80.39 ಕೋಟಿ ರೂ. ವ್ಯವಹಾರ ನಡೆಸಿ, 40.96 ಲಕ್ಷ ರೂ. ಲಾಭ ಗಳಿಸಿದ್ದು, ಶೇ.10 ಡಿವಿಡೆಂಡ್ ನೀಡಲಾಯಿತು. ನಮ್ಮಲ್ಲಿ 4008 ಸದಸ್ಯರಿದ್ದು, ಪ್ರಸ್ತುತ 18.40 ಕೋಟಿ ರೂ.ಗಿಂತ ಹೆಚ್ಚು ಸಾಲ ಕೊಟ್ಟಿದ್ದು, 18.92 ಕೋಟಿ ರೂ. ಠೇವಣಿಯಿದೆ ಎಂದರು.

ಮುಖ್ಯ ಕಾರ್ಯನಿರ್ವಣಾಧಿಕಾರಿ ಧನಂಜಯ ಕುಮಾರ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರಾದ ನಾರಾಯಣ ಗೌಡ, ದೇವಸ್ಯ ಕೃಷ್ಣಪ್ಪ ಗೌಡ ಸವಣಲು, ಜಯಾನಂದ ಗೌಡ, ಗೋಪಾಲಕೃಷ್ಣ ಗುಲ್ಲೋಡಿ, ಶ್ರೀನಾಥ್ ಕೆ.ಎಂ.ಸುರೇಶ್ ಕೌಡಂಗೆ, ಯಶವಂತ್ ಗೌಡ, ಉಷಾ ಕಿನ್ನಾಜೆ, ಭವಾನಿ ಗೌಡ, ಸುನೀಲ್ ಅಣವು ಉಪಸ್ಥಿತರಿದ್ದರು. ಉಪಾಧ್ಯಕ್ಷ ಕುಶಾಲಪ್ಪ ಗೌಡ ಸ್ವಾಗತಿಸಿದರು. ಸೋಮಂಡ್ಕ ಶಾಖೆಯ ಉಮೇಶ್ ನಿರೂಪಿಸಿದರು. ನಿರ್ದೇಶಕ ಮಾಧವ ಗೌಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net