

ಪುತ್ತೂರು: ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆರುವ ವಂದೇ ಭಾರತ್ ಮಿಷನ್‌ನಲ್ಲಿ ಬುಧವಾರ ಸಿಂಗಾಪುರದಿಂದ ಬೆಂಗಳೂರಿಗೆ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ ಏರ್‌ಕ್ರೂ(ಗಗನಸಖಿ) ಅಶ್ವಿನಿ ಮಂಗಳೂರು ಕರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಏರ್ ಇಂಡಿಯಾ ವಿಮಾನ ಸಿಂಗಾಪುರಕ್ಕೆ ಬುಧವಾರ ಬೆಳಗ್ಗೆ ತೆರಳಿ ರಾತ್ರಿ 10 ಗಂಟೆಗೆ 152 ಭಾರತೀಯರನ್ನು ಕರೆತಂದಿದೆ. ಈ ಕಾರ್ಯಾಚಣೆಯ ಪ್ರಮುಖ ಭಾಗವಾಗಿ ಅಶ್ವಿನಿ ಕಾರ್ಯನಿರ್ವಹಿಸಿದ್ದರು. ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್‌ಗೆ ಆಯ್ಕೆ ಮಾಡಿದ 100 ಮಂದಿ ವಿಮಾನ ಸಿಬ್ಬಂದಿ ಪೈಕಿ ಈಕೆಯೂ ಒಬ್ಬರು.
ಬಡ ಕುಟುಂಬದಲ್ಲಿ ಜನಿಸಿದ ಕೊಣಾಜೆ ನಿವಾಸಿ ಅಶ್ವಿನಿ, ಮಂಗಳೂರಿನಲ್ಲೇ ಶಿಕ್ಷಣ ಪೂರೈಸಿದ್ದರು. ಎಬಿವಿಪಿಯ ವಿದ್ಯಾರ್ಥಿ ನಾಯಕಿಯಾಗಿಯೂ ಗುರುತಿಸಿಕೊಂಡಿದ್ದರು. ಮೂರು ವರ್ಷಗಳಿಂದ ಏರ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಥಿ ದೆಸೆಯಲ್ಲೇ ಎಬಿವಿಪಿ ಮೂಲಕ ನಾಯಕತ್ವದ ಗುಣ ಬೆಳೆದು ಬಂದಿದೆ. ವಂದೇ ಭಾರತ್ ಮಿಷನ್‌ನಲ್ಲಿ ಭಾಗವಹಿಸುವ ಮೂಲಕ ದೇಶದ ಹಿತಕ್ಕೆ ಶ್ರಮಿಸಿಸುವ ಭಾಗ್ಯ ನನಗೆ ಬಂದಿದೆ. ದೇಶ ಹಾಗೂ ಭಾರತೀಯರಿಗಾಗಿ ನನ್ನದೊಂದು ಸಣ್ಣ ಕರ್ತವ್ಯ ಪೂರೈಸಿದೆ.
- ಅಶ್ವಿನಿ ಮಂಗಳೂರು, ಏರ್ ಇಂಡಿಯಾದ ಏರ್‌ಕ್ರೂ