

ಹುಬ್ಬಳ್ಳಿ: ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (ಪ್ರಾಯೋಗಿಕ) ಹುಬ್ಬಳ್ಳಿ-ಧಾರವಾಡಕ್ಕೆ ಆಗಮನ. ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ ಕಿಶೋರ್ ಇತರರು ಭಾಗಿ. ಸುದ್ದಿಗಾರರೊಂದಿಗೆ ಮಾತನಾಡಿದ ಸಂಜೀವ, ಪ್ರಾಯೋಗಿಕವಾಗಿ ಇಂದು 110 ಕಿ.ಮೀ. /ಪ್ರತಿ ತಾಸಿಗೆ ಸಂಚರಿಸಿತು. ಕೆಲ ದಿನಗಳ ಹಿಂದೆ ಹುಬ್ಬಳ್ಳಿ ಸಮೀಪದ 20 ಕಿ.ಮೀ. ಇಲೆಕ್ಟ್ರಿಫಿಕೇಷನ್ ಕಾಮಗಾರಿ ಪೂರ್ಣಗೊಂಡಿದೆ. ಯಾವುದೇ ತೊಂದರೆ ಕಂಡುಬಂದಿಲ್ಲ. ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುವ ಈ ರೈಲಿನಲ್ಲಿ ಸಾಮಾನ್ಯ ರೈಲುಗಳಿಗಿಂತ 40-50 ನಿಮಿಷ ಮುಂಚೆ ಪ್ರಯಾಣಿಕರು ನಿಲ್ದಾಣ ತಲುಪಬಹುದು. ಟಿಕೆಟ್ ದರ, ನಿಲ್ದಾಣಗಳನ್ನು ಇನ್ನೂ ನಿರ್ಧರಿಸಿಲ್ಲ ಎಂದರು.