ಹಾವೇರಿಯಲ್ಲಿ ವಂದೇ ಭಾರತ್​ ರೈಲು ನಿಲುಗಡೆ

h6-vande bharat rail
Published on

ಹುಬ್ಬಳ್ಳಿ : ಕೆಎಸ್​ಆರ್​ ಬೆಂಗಳೂರು-ಧಾರವಾಡ-ಕೆಎಸ್​ಆರ್​ ಬೆಂಗಳೂರು ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಹಾವೇರಿಯ ಶ್ರೀ ಮಹದೇವಪ್ಪ ಮೈಲಾರ ರೈಲು ನಿಲ್ದಾಣದಲ್ಲಿ ಏ. 11 ರಿಂದ ಪ್ರಾಯೋಗಿಕವಾಗಿ ಎರಡು ನಿಮಿಷಗಳ ನಿಲುಗಡೆಗೊಳ್ಳಲಿದೆ.

ಧಾರವಾಡದಿಂದ ಬೆಂಗಳೂರಿಗೆ ತೆರಳುವ ಈ ರೈಲು ಹಾವೇರಿ ನಿಲ್ದಾಣಕ್ಕೆ ಮಧ್ಯಾಹ್ನ 2.40ಕ್ಕೆ ಆಗಮಿಸಿ, 2.42ಕ್ಕೆ ಹೊರಡಲಿದೆ.

ಬೆಂಗಳೂರಿನಿಂದ ಧಾರವಾಡಕ್ಕೆ ತೆರಳುವ ರೈಲು ಹಾವೇರಿ ನಿಲ್ದಾಣಕ್ಕೆ ಬೆಳಗ್ಗೆ 10.10ಕ್ಕೆ ಆಗಮಿಸಿ, 10.12ಕ್ಕೆ ಹೊರಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net