

ಬೆಳಗಾವಿ: ಬೆಂಗಳೂರು-ಧಾರವಾಡ ನಡುವೆ ಸಧ್ಯ ಸಂಚರಿಸುತ್ತಿರುವ "ವಂದೆ ಭಾರತ" ರೈಲು ಸಂಚಾರವನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸಲಾಗಿದ್ದು, ಅದರಂತೆ ನೂತನ ವೇಳಾ ಪಟ್ಟಿಯಂತೆ ಶೀಘ್ರದಲ್ಲಿ ತನ್ನ ನೂತನ ಸಂಚಾರವನ್ನು ಬೆಳಗಾವಿಯಿಂದ ಆರಂಭಿಸಲಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರು ತಿಳಿಸಿದ್ದಾರೆ.
ಈ ಕುರಿತು ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಅವರೊಂದಿಗೆ, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ ಜೋಶಿ ಹಾಗೂ ಉಪಸ್ಥಿಯಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಕೊಳ್ಳಲಾಗಿದೆ. ಪ್ರಸ್ತಾಪಿತ ರೈಲಿನ ಸೇವೆಯನ್ನು ಬೆಳಗಾವಿಯ ವರೆಗೆ ವಿಸ್ತರಿಸುವ ಕುರಿತು ಅನೇಕ ತಿಂಗಳುಗಳಿಂದ ಪ್ರಯತ್ನಿಸಲಾಗಿತ್ತು. ಈಚೆಚಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸಹ ಭೇಟಿ ಮಾಡಲಾವಿತ್ತು. ಕೇಂದ್ರ ಸೋಮಣ್ಣ ಅವರೂ ಪ್ರಯತ್ನಿಸಿದ್ದರು. ಇದೆಲ್ಲದರ ಹಿನ್ನೆಲೆಯಲ್ಲಿ ಫಲ ದೊರಕಿದಂತಾಗಿದೆ ಹಾಗೂ ಬೆಳಗಾವಿ ನಿವಾಸಿಗಳ ಅನೇಕ ದಿನಗಳ ಬೇಡಿಕೆ ಈಡೇರಿದೆ ಎಂದು ಶೆಟ್ಟರ್ ತಿಳಿಸಿದ್ದಾರೆ.