ವಂದೇ ಭಾರತ್ ರೈಲು ಇಂದಿನಿಂದ ನಿರಂತರ ಸಂಚಾರ

Vande Bharat New
Published on

ಹುಬ್ಬಳ್ಳಿ : ಇಲ್ಲಿನ ರೈಲು ನಿಲ್ದಾಣದಲ್ಲಿ ಮಂಗಳವಾರ ಲೋಕಾರ್ಪಣೆಗೊಂಡ ಕೆಎಸ್​ಆರ್ ಬೆಂಗಳೂರು-ಧಾರವಾಡ- ಕೆಎಸ್​ಆರ್ ಬೆಂಗಳೂರು ವಂದೇ ಭಾರತ್ ರೈಲು ಜೂ. 28ರಿಂದ ನಿರಂತರವಾಗಿ ಸಂಚರಿಸಲಿದೆ (ಮಂಗಳವಾರ ಹೊರತುಪಡಿಸಿ).

ಕೆಎಸ್​ಆರ್ ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 5.45ಕ್ಕೆ ಹೊರಡುವ ಈ ರೈಲು, 5.57ಕ್ಕೆ ಯಶವಂತಪುರ, 9.17ಕ್ಕೆ ದಾವಣಗೆರೆ, 11.30ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ಹಾಗೂ ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪಲಿದೆ. ಮಧ್ಯಾಹ್ನ 1.15ಕ್ಕೆ ಧಾರವಾಡದಿಂದ ಹೊರಟು, 1.35ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ, 3.38ಕ್ಕೆ ದಾವಣಗೆರೆ, ರಾತ್ರಿ 7.13ಕ್ಕೆ ಯಶವಂತಪುರ ಹಾಗೂ 7.45ಕ್ಕೆ ಕೆಎಸ್​ಆರ್ ಬೆಂಗಳೂರು ನಿಲ್ದಾಣ ತಲುಪುವುದು.

ಕೆಎಸ್​ಆರ್ ಬೆಂಗಳೂರಿನಿಂದ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಎಸಿ ಚೇರ್ ಕಾರ್ 1,155 ರೂ. ಹಾಗೂ ಎಕ್ಸಿಕ್ಯೂಟಿವ್ ಕ್ಲಾಸ್ 2,200 ರೂ. ಮತ್ತು ಧಾರವಾಡಕ್ಕೆ ಎಸಿ ಚೇರ್ ಕಾರ್ 1,185, ಎಕ್ಸಿಕ್ಯೂಟಿವ್ ಕ್ಲಾಸ್​ಗೆ 2,265 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.

ಇನ್ನುಳಿದ ನಿಲ್ದಾಣಗಳಾದ ಕ್ರಮವಾಗಿ ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್​ಗೆ ಕೆಎಸ್​ಆರ್ ಬೆಂಗಳೂರು-ಯಶವಂತಪುರ ಮಧ್ಯೆ 365 ರೂ. ಮತ್ತು 690, ಕೆಎಸ್​ಆರ್ ಬೆಂಗಳೂರು-ದಾವಣಗೆರೆ ಮಧ್ಯೆ 935 ರೂ. ಮತ್ತು 1,760 ರೂ., ಯಶವಂತಪುರ-ದಾವಣಗೆರೆ ಮಧ್ಯೆ 920 ರೂ. ಮತ್ತು 1,730 ರೂ., ಯಶವಂತಪುರ- ಎಸ್​ಎಸ್​ಎಸ್ ಹುಬ್ಬಳ್ಳಿ ಮಧ್ಯೆ 1,155 ರೂ. ಮತ್ತು 2,220 ರೂ., ಯಶವಂತಪುರ- ಧಾರವಾಡ ಮಧ್ಯೆ 1,185 ರೂ. ಮತ್ತು 2,265 ರೂ., ದಾವಣಗೆರೆ- ಎಸ್​ಎಸ್​ಎಸ್ ಹುಬ್ಬಳ್ಳಿ ಮಧ್ಯೆ 520 ರೂ. ಮತ್ತು 1,005 ರೂ., ದಾವಣಗೆರೆ-ಧಾರವಾಡ ಮಧ್ಯೆ 555 ರೂ. ಮತ್ತು 1,075 ರೂ., ಎಸ್​ಎಸ್​ಎಸ್ ಹುಬ್ಬಳ್ಳಿ -ಧಾರವಾಡ ಮಧ್ಯೆ 365 ರೂ. ಮತ್ತು 690 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.

ಧಾರವಾಡದಿಂದ ಕೆಎಸ್​ಆರ್ ಬೆಂಗಳೂರಿಗೆ 1,350 ರೂ. ಮತ್ತು 2,460 ರೂ., ಎಸ್​ಎಸ್​ಎಸ್ ಹುಬ್ಬಳ್ಳಿ-ಕೆಎಸ್​ಆರ್ ಬೆಂಗಳೂರಿಗೆ 1,320 ಮತ್ತು 2,395 ರೂ.,ಧಾರವಾಡದಿಂದ ದಾವಣಗೆರೆ 765 ಮತ್ತು 1,305, ಧಾರವಾಡದಿಂದ ಯಶವಂತಪುರಕ್ಕೆ 1,350 ರೂ. ಮತ್ತು 2,460 ರೂ., ಎಸ್​ಎಸ್​ಎಸ್ ಹುಬ್ಬಳ್ಳಿಯಿಂದ ದಾವಣಗೆರೆಗೆ 725 ರೂ. ಮತ್ತು 1,235 ರೂ., ಹುಬ್ಬಳ್ಳಿಯಿಂದ ಯಶವಂತಪುರ 1,320 ರೂ. ಮತ್ತು 2,395 ರೂ., ದಾವಣಗೆರೆಯಿಂದ ಯಶವಂತಪುರಕ್ಕೆ 865 ರೂ. ಮತ್ತು 1,680 ರೂ., ದಾವಣಗೆರೆಯಿಂದ ಕೆಎಸ್​ಆರ್ ಬೆಂಗಳೂರು ನಿಲ್ದಾಣಕ್ಕೆ 880 ರೂ. ಮತ್ತು 1,710 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net