

ಆನೇಕಲ್ : ಖರೀದಿಸಿದ ಸಿಗರೇಟ್ಗೆ ಹಣ ಕೇಳಿದ್ದಕ್ಕೆ ಗಾಂಜಾ ಮತ್ತಿನಲ್ಲಿದ್ದ ಕಿಡಿಗೇಡಿ ಬೇಕರಿಯನ್ನು ಧ್ವಂಸ ಮಾಡಿದ್ದಾನೆ.
ಆನೇಕಲ್ ತಾಲೂಕಿನ ಬೆಂಗಳೂರು ದಣ ೇತ್ರದ ಶಾನುಭೋಗನಹಳ್ಳಿಯ ಬೇಕರಿ ಹಾಗೂ ಕಾಂಡಿಮೆಂಟ್ಸ್ ಗೆ ಸೋಮವಾರ ಬೆಳ್ಳಂಬೆಳಗ್ಗೆ ಗಾಂಜಾ ಮುತ್ತಿನಲ್ಲಿ ಬಂದ ಅದೇ ಗ್ರಾಮದ ಹರೀಶ್ ಹಾಗೂ ಆತನ ಸ್ನೇಹಿತ ಸಿಗರೇಟ್ ತೆಗೆದುಕೊಂಡಿದ್ದಾರೆ, ಬೇಕರಿ ಮಾಲೀಕ ಬೈಂದೂರು ತಾಲೂಕಿನ ಕೆರಾಡಿ ಗ್ರಾಮದ ನಾರಾಯಣಶೆಟ್ಟಿ ಸಿಗರೇಟಿಗೆ 130 ರೂಪಾಯಿ ನೀಡುವಂತೆ ಕೇಳಿದ್ದಕ್ಕೆ ಕೋಪಗೊಂಡ ಹರೀಶ್ ಏಕಾಏಕಿ ಬೇಕರಿ ಮುಂಭಾಗದ ಶೋ ಕೇಸ್ ಒಡೆದು ಹಾಕಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಬೇಕರಿ ಒಳಗೆ ನುಗ್ಗಿ ವಸ್ತುಗಳನ್ನೆಲ್ಲ ಎಸೆದಿರುವುದಲ್ಲದೆ, ಗಾಜುಗಳನ್ನು ಧ್ವಂಸ ಮಾಡಿದ್ದಾನೆ.
ಸದಾ ಗಾಂಜಾ ಮತ್ತಿನಲ್ಲೇ ಇರುವ ಈತ ಈ ಹಿಂದೆಯೂ ಬೆದರಿಕೆ ಹಾಕಿದ್ದ. ಸೋಮವಾರವೂ ಅದೇ ರೀತಿ ವರ್ತಿಸಿದ್ದಾನೆ ಎಂದು ಮಾಲೀಕ ನಾರಾಯಣಶೆಟ್ಟಿ ಬನ್ನೇರುಟ್ಟ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳ ಮಹಜರು ನಡೆಸಿದ ಪೊಲೀಸರು, ತಲೆಮೆರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬೆಂಬಲ ವ್ಯಕ್ತಪಡಿಸಿದ ಒಕ್ಕೂಟ : ಟನೆ ಬಗ್ಗೆ ಮಾಹಿತಿ ತಿಳಿದು ಶಾನುಭೋಗನಹಳ್ಳಿ ಗ್ರಾಮಕ್ಕೆ ಆಗಮಿಸಿದ ರಾಜ್ಯ ಬೇಕರಿ ಮತ್ತು ಕಾಂಡಿಮೆಂಟ್ಸ್ ಸಣ್ಣ ಉದ್ದಿಮೆದಾರರ ಒಕ್ಕೂಟದ ಅಧ್ಯಕ್ಷ ಪ್ರತಾಪ್ ಶೆಟ್ಟಿ ಹಾಗೂ ತಂಡವು ನಾರಾಯಣ ಶೆಟ್ಟಿ ಅವರ ಜತೆಗೆ ಬನ್ನೇರುಟ್ಟ ಪೊಲೀಸ್ ಠಾಣೆಗೆ ಆಗಮಿಸಿ ಇನ್ಸ್ಪೆಕ್ಟರ್ ಕೃಷ್ಣಕುಮಾರ್ ಅವರಿಗೆ ಮನವಿ ಸಲ್ಲಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿತು.
ಕಗ್ಗಲಿಪುರ ರಸ್ತೆಯಲ್ಲೂ ಗಲಾಟೆ : ಬೇಕರಿ ದ್ವಂಸ ಮಾಡಿರುವ ಆರೋಪಿ ಹರೀಶ್, ಭಾನುವಾರ ರಾತ್ರಿ ಕಗ್ಗಲಿಪುರ ರಸ್ತೆಯಲ್ಲಿ ಅಲ್ಲಿನ ಸ್ಥಳಿಯರೊಂದಿಗೆ ಗಲಾಟೆ ಮಾಡಿಕೊಂಡಿದ್ದ, ಅಲ್ಲಿದ್ದವರು ಈತನ ಬೈಕ್ ಹಾಗೂ ಮೊಬೈಲ್ ಕಸಿದುಕೊಂಡು ಕಳುಹಿಸಿದ್ದರು, ಇದಾದ ಬಳಿಕವೂ ಎಚ್ಚೆತ್ತುಕೊಳ್ಳದ ಆರೋಪಿ ನಶೆಯಲ್ಲಿ ಸೋಮವಾರ ಬೆಳಗ್ಗೆ ಬೇಕರಿ ಧ್ವಂಸ ಮಾಡಿದ್ದಾನೆ.
ಆನೇಕಲ್: ಕುಡಿದ ನಶೆಯಲ್ಲಿ ಇಬ್ಬರ ನಡುವಿನ ಗಲಾಟೆಯಲ್ಲಿ ಒಬ್ಬನ ಕೊಲೆಯಾಗಿದ್ದು, ಮತ್ತೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ಬಿಹಾರ ಮೂಲದ ಸುರೇಶ್(21) ಮೃತ. ಬಿಹಾರದ ಮುನ್ನಾ ಬಂಧಿತ. ಆನೇಕಲ್ ಕೆಎಸ್ಸಾರ್ಟಿಸಿ ಕಾಲನಿ ಮನೆಯಲ್ಲಿ ಶವ ಪತ್ತೆಯಾಗಿದೆ. ಸುರೇಶ್ ಮತ್ತು ಮುನ್ನಾ ಗಾರೆ ಕೆಲಸ ಮಾಡಿಕೊಂಡು ಒಂದೇ ರೂಂನಲ್ಲಿ ವಾಸವಿದ್ದರು. ಭಾನುವಾರ ಇಬ್ಬರೂ ನಶೆಯಲ್ಲಿದ್ದರು. ಹಾದಿಬೀದಿಯಲ್ಲಿ ತೂರಾಡುತ್ತಾ ಬಡಿದಾಡಿಕೊಂಡಿದ್ದರು. ಸ್ಥಳಿಯ ನಿವಾಸಿಗಳು ಬುದ್ಧಿ ಹೇಳಿದರೂ ಹೊಡೆದಾಟ ನಿಂತಿರಲಿಲ್ಲ. ಕೊನೆಗೆ ಮನೆ ಮಾಲೀಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರೂ ಬಂದು ಬುದ್ಧಿ ಹೇಳಿ ಹೋಗಿದ್ದರು. ಆದರೆ, ರಾತ್ರಿ 11 ಗಂಟೆ ಬಳಿಕ ಶಾಂತವಾಗಿದ್ದರು. ನಿದ್ರೆಗೆ ಜಾರಿರಬಹುದು ಎಂದು ಸುತ್ತಮುತ್ತಲಿನ ನಿವಾಸಿಗಳು ಸುಮ್ಮನಾಗಿದ್ದರು. ಆದರೆ, ಬೆಳಗಾಗುತ್ತಿದ್ದಂತೆ ಸುರೇಶ್ ಮೃತಪಟ್ಟಿದ್ದಾನೆ ಎಂದು ಸ್ಥಳಿಯರ ಬಳಿ ಆರೋಪಿ ಮುನ್ನಾ ಹೇಳಿದ್ದಾನೆ. ಸ್ಥಳಿಯರು ಕೊಠಡಿ ಬಳಿ ಹೋಗುತ್ತಿದ್ದಂತೆ ಆಡುಗೆ ಮನೆಯಿಂದ ಸುರೇಶ್ ಶವವನ್ನು ನಡುಮನೆಗೆ ಎಳೆದು ತಂದಿದ್ದಾನೆ. ಜನ ಗುಂಪು ಸೇರುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.