ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

UDP-24-4-Vanamahotsava
ಉಡುಪಿಯ ಶ್ರೀಕೃಷ್ಣಾನುಗ್ರಹ ಮಕ್ಕಳ ಕೇಂದ್ರದಲ್ಲಿ ವನಮಹೋತ್ಸವ ಆಚರಿಸಲಾಯಿತು. ಡಾ.ಉಮೇಶ್​ ಪ್ರಭು, ಜನಾರ್ದನ್​ ಕೊಡವೂರು, ರಾಜೇಶ್​ ಭಟ್​ ಪಣಿಯಾಡಿ, ಕುಮಾರಸ್ವಾಮಿ ಉಡುಪ, ಚೈತನ್ಯ ಎಂ.ಜಿ., ರಘುಪತಿ ರಾವ್​, ಪೂರ್ಣಿಮಾ ಜನಾರ್ದನ್​, ಸ್ವಾಮಿ ಚಿಕ್ಕಮಠ, ಪ್ರಭಾಕರ ಪೂಜಾರಿ ಹಾಗೂ ವಿದ್ಯಾರ್ಥಿಗಳು ಇದ್ದರು.
Published on

ಡಾ.ಉಮೇಶ್​ ಹೇಳಿಕೆ | ಶ್ರೀಕೃಷ್ಣಾನುಗ್ರಹ ಮಕ್ಕಳ ಕೇಂದ್ರದಲ್ಲಿ ವನಮಹೋತ್ಸವ

ಉಡುಪಿ: ಪರಿಸರ ಚೆನ್ನಾಗಿದ್ದರೆ ನಾವೆಲ್ಲರೂ ಚೆನ್ನಾಗಿರಬಹುದು. ಹೀಗಾಗಿ ಪರಿಸರ ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮಗಾಗಿಯೇ ಗಿಡ ನೆಟ್ಟು, ಅವುಗಳನ್ನು ಪಾಲನೆ ಮಾಡಬೇಕು ಎಂದು ಮೂಳೆ ರೋಗಗಳ ಖ್ಯಾತ ತಜ್ಞ ಡಾ.ಉಮೇಶ್​ ಪ್ರಭು ಕರೆ ನೀಡಿದರು.

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್​ ಹಾಗೂ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ವತಿಯಿಂದ ಶ್ರೀಕೃಷ್ಣಾನುಗ್ರಹ ಮಕ್ಕಳ ಕೇಂದ್ರದ ಮಮತೆಯ ತೊಟ್ಟಿಲಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವನಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ್​ ಕೊಡವೂರು, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್​ ಪ್ರ.ಕಾರ್ಯದರ್ಶಿ ರಾಜೇಶ್​ ಭಟ್​ ಪಣಿಯಾಡಿ, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಚೈತನ್ಯ ಎಂ.ಜಿ., ರಘುಪತಿ ರಾವ್​, ಪೂರ್ಣಿಮಾ ಜನಾರ್ದನ್​, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸ್ವಾಮಿ ಚಿಕ್ಕಮಠ, ಕರವೇ ಉಡುಪಿ ಜಿಲ್ಲಾ ಸಂಚಾಲಕ ಪ್ರಭಾಕರ ಪೂಜಾರಿ, ಕೃಷ್ಣಾನುಗ್ರಹ ಮಕ್ಕಳ ಕೇಂದ್ರದ ಮುಖ್ಯಸ್ಥ ಉದಯಕುಮಾರ್​, ಧನ್ವಂತರಿ ನರ್ಸಿಂಗ್​ ಕಾಲೇಜಿನ ಹಾಗೂ ರೋಟರಾಕ್ಟ್​ ಕ್ಲಬ್​ನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಗಿಡಗಳ ವಿತರಣೆ

ಸಂಸ್ಥೆಯ ಆವರಣದಲ್ಲಿ ವಿವಿಧ ಹಣ್ಣಿನ ಗಿಡ ನೆಡಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವಿರಿಗೆ ವಿವಿಧ ಗಿಡಗಳನ್ನೂ ವಿತರಿಸಲಾಯಿತು.
ಡಾ. ಶ್ರೀಪತಿ ರಾವ್​ ಪ್ರಾರ್ಥಿಸಿದರು. ಜಿಲ್ಲಾ ಯುವ ಬ್ರಾಹ್ಮಣ ಪರಿಷತ್​ ಅಧ್ಯಕ್ಷ ಚಂದ್ರಕಾಂತ್​ ಕೆ.ಎನ್​. ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು. ವಿಷ್ಣುಪ್ರಸಾದ್​ ಪಾಡಿಗಾರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net