ಪರಿಸರ ಉಳಿದರೆ ಸಮೃದ್ಧ ಮಳೆ- ಬೆಳೆ

VANAMHOTSAVA
Published on

ಮುಂಡರಗಿ: ಆಮ್ಲಜನಕ ನೀಡುವ ಜೀವದಾತವಾಗಿರುವ ಗಿಡ-ಮರಗಳನ್ನು ಸಂರಕ್ಷಣೆ ಮಾಡಬೇಕು. ಜೀವನದಲ್ಲಿ ಹಸಿರು ಉಸಿರಾಗಿ ಬೆರೆತಿದೆ. ಪರಿಸರವನ್ನು ಬೆಳೆಸಿದರೆ ಮಳೆ- ಬೆಳೆ ಸಮೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಗ್ರಾಪಂ ಸದಸ್ಯ ಅಂದಪ್ಪ ತಿಪ್ಪಣ್ಣವರ ಹೇಳಿದರು.

ತಾಲೂಕಿನ ಕೊರ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಮಕ್ತುಂಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆಯ ಕಪ್ಪತ್ತಹಿಲ್ಸ್ ಹಾಗೂ ಎಸ್‌ಡಿಎಂಸಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಪ ವಲಯ ಅರಣ್ಯಾಧಿಕಾರಿ ಸಂತೋಷ ಕದಾಳ ಮಾತನಾಡಿ, ಅರಣ್ಯ ಸಂರಕ್ಷಣೆಗೆ ಎಲ್ಲರೂ ಸಹಕಾರ ನೀಡಬೇಕು. ಅರಣ್ಯವನ್ನು ನಾವು ನಾಶ ಮಾಡಿದರೆ ಅರಣ್ಯದಲ್ಲಿರುವ ಕಾಡು ಮೃಗಗಳು ನಾಡು ಸೇರುತ್ತವೆ. ಮಳೆ ಕೊರತೆ ಉಂಟಾಗುತ್ತದೆ ಎಂದರು.

ವನಮಹೋತ್ಸವದಲ್ಲಿ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮೈಲಾರಪ್ಪ ಮಡಿವಾಳ, ಮುಖ್ಯಶಿಕ್ಷಕ ವಿ.ಆರ್. ಕುರುಡಗಿ, ಸಹ ಶಿಕ್ಷಕರಾದ ಎ.ಆರ್. ಕೊಟ್ಟೂರುಶೆಟ್ಟರ, ಜಿ.ಟಿ. ಸಿದ್ದಾಪುರ, ಹನುಮಂತಮ್ಮ, ಗ್ರಾಪಂ ಮಾಜಿ ಉಪಾಧ್ಯಕ್ಷ ಲಲಿತಮ್ಮ ಹೊಸಮನಿ, ಯುವ ಮುಖಂಡ ಶರಣಪ್ಪ ಹೊಸಮನಿ, ರಾಜೇಶ್ ಬರದೂರ, ಆನಂದ ಬರದೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net