ಶಾರದಾ ವಿದ್ಯಾನಿಕೇತನದಲ್ಲಿ ಮನಮಹೋತ್ಸವ

sharada
ತಲಪಾಡಿ ಶಾರದಾ ವಿದ್ಯಾನಿಕೇತನದಲ್ಲಿ ವನಮಹೋತ್ಸವ ಆಚರಿಸಲಾಯಿತು. ವಿದ್ಯಾರ್ಥಿಗಳು ಶಾಲಾ ಪರಿಸರದಲ್ಲಿ ಗಿಡನೆಟ್ಟರು.
Published on

ಮಂಗಳೂರು: ಮರಗಳನ್ನು ಬೆಳೆಸುವ ಹಬ್ಬ ವನಮಹೋತ್ಸವವನ್ನು ತಲಪಾಡಿಯ ಶಾರದಾ ವಿದ್ಯಾನಿಕೇತನದಲ್ಲಿ ಆಚರಿಸಲಾಯಿತು.

ಶಾಲಾ ಪ್ರಾಂಶುಪಾಲೆ ಸುಷ್ಮಾ ದಿನಕರ್ ಅಧ್ಯಕ್ಷತೆ ವಹಿಸಿದ್ದರು. ಮನುಕುಲವು ತಮ್ಮ ಅಗತ್ಯಗಳಿಗಾಗಿ ಮರಗಳ ಮೇಲೆ ಅವಲಂಬಿತವಾಗಿದೆ. ಪರಿಸರ ಹಸಿರಾಗಿದ್ದರೆ ಮಾತ್ರ ನಾವೆಲ್ಲರೂ ಉತ್ತಮ ಜೀವನ ಡೆಸಲು ಸಾಧ್ಯ. ಪ್ರತಿ ಮನೆಯ ಕುಟುಂಬದ ಸದಸ್ಯರು ಒಂದು ಗಿಡ ನೆಟ್ಟು ಅದನ್ನು ಪೋಷಿಸುವ ದೃಢ ಸಂಕಲ್ಪವನ್ನು ಕೈಗೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಒಂಬತ್ತನೆ ಎ ತರಗತಿಯ ವಿದ್ಯಾರ್ಥಿಗಳು ವನಮಹೋತ್ಸವದ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕ-ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು. ಅನಂತರ ವಿದ್ಯಾರ್ಥಿಗಳು ತರಗತಿವಾರು ಗಿಡಗಳನ್ನು ನೆಟ್ಟು ಅದನ್ನು ನೀರುಣಿಸಿ ಪೋಷಿಸುವ ದೀಕ್ಷೆ ಕೈಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net