ಬೆಳಗಾವಿ ಕೆ.ಎಲ್.ಇ ದಂತ ಮಹಾವಿದ್ಯಾಲಯದಿಂದ ವನಮೋಹೋತ್ಸವ

31RAVIG4.jpg
Published on

ಬೆಳಗಾವಿ : ಹಸಿರು ಈ ನಾಡಿನ ಉಸಿರು. ಪ್ರಕೃತಿಯೇ ದೇವರು, ಜೀವ ಜೀವನ ಉತ್ತಮವಾಗಿರಲು ಹಸಿರು ಅತ್ಯಂತ ಮಹತ್ವದ್ದಾಗಿದೆ ಎಂದು  ಪ್ರಾಚಾರ್ಯ ಡಾ.ಅಲ್ಕಾ ಕಾಳೆ ಹೇಳಿದರು.

ಬೆಳಗಾವಿಯಲ್ಲಿನ ಕೆಎಲ್‌ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ವತಿಯಿಂದ ಬಂಬರಗ ಗ್ರಾಮದಲ್ಲಿ ‘ಮೇರಿ ಮತಿ ಮೇರೆ ದೇಶ್’ ಅಭಿಯಾನದಡಿ ಬುಧವಾರ  ವನಮೋಹೋತ್ಸವ ಉದ್ಘಾಟಿಸಿ, ಮಾತನಾಡಿದ ಅವರು, ಕಾಂಕ್ರೆಟ್ ಕಡಿಮೆ ಮಾಡಿ ಹಸಿರು ಉಳಿಸಿ, ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಹಸಿರನ್ನು ಸಂರಕ್ಷಿಸಬೇಕು ಎಂದರು.

ಮಹಾವಿದ್ಯಾಲಯದ ಓರಲ್ ಅಂಡ್ ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ರೀಡರ್ ಡಾ.ಆರತಿ ನೀಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ದಂತ ವಿದ್ಯಾಲಯದ ಪ್ರತಿನಿಧಿಗಳು ಹಸಿರನ್ನು ಉಳಿಸಿ ಸಂರಕ್ಷಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.  

ಬಂಬರಗ ಗ್ರಾಮದ ಪ್ರಾಥಮಿಕ ಶಾಲೆಯ ಆವರಣ ಮತ್ತು ಪ್ರಶಾಂತ ಜ್ಯೋತಿಬಾ ದೇವಸ್ಥಾನದ ಆವರಣದಲ್ಲಿ ಸುಮಾರು 70 ಸಸಿಗಳನ್ನ ನೆಟ್ಟು ನೀರುಣಿಸಲಾಯಿತು.ಅಪ್ಪು ನಾಯಕ್, ಅಶೋಕ ಹಂಚಿನಮನಿ ಸೇರಿದಂತೆ ಶಾಲಾ ಮಕ್ಕಳು ಮತ್ತು ದಂತ ವದ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net