

ಕಾಸರಗೋಡು: ಪೆರ್ಲ ಸನಿಹದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಕ್ಲಬ್ ವಠಾರದಲ್ಲಿ ಜರುಗಿತು.
ಕ್ಲಬ್ನ ಹಿರಿಯ ಸದಸ್ಯರಾದ ಚಂದ್ರಶೇಖರ ಆಚಾರ್ಯ ಹಾಗೂ ಮಹಾಬಲ ರೈ ಬಜಕೂಡ್ಲು ಚಾಲನೆ ನೀಡಿದರು. ಕ್ಲಬ್ ಅಧ್ಯಕ್ಷ ಚಂದ್ರ ಅಮೆಕ್ಕಳ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಸಂತೋಷ್ ಖಂಡಿಗೆ, ಗೌರವಾಧ್ಯಕ್ಷ ಪದ್ಮನಾಭ ಸುವರ್ಣ, ಸುಜಿತ್ ರೈ, ವಿನೋದ್ ಶೆಟ್ಟಿ ಬಜಕೂಡ್ಲು, ದೀಕ್ಷಿತ್ ಪೂಜಾರಿ, ಅಶ್ವತ್ ಬಜಕೂಡ್ಲು, ರಾಜೇಶ್ ಮಾಸ್ಟರ್ ಬಜಕೂಡ್ಲು, ಅಭಿರಾಮ್ ಮೊದಲಾದವರಿದ್ದರು.
ಕ್ಲಬ್ ಅಧ್ಯಕ್ಷ ಚಂದ್ರ ಅಮೆಕ್ಕಳ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಕ್ಲಬ್ನ ವತಿಯಿಂದ ನಡೆಸಲಿರುವ ಕಾರ್ಯಯೋಜನೆಗಳ ಬಗ್ಗೆ ರೂಪುರೇಷೆ ತಯಾರಿಸಲಾಯಿತು.