

ಹೊನ್ನಾವರ: ‘ಗಿಡಗಳನ್ನು ನೆಟ್ಟು ಪರಿಸರವನ್ನು ಉಳಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ’ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಉದಯ ನಾಯ್ಕ ಹೇಳಿದರು.
ತಾಲೂಕಿನ ಮೂರಕಟ್ಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡು ಪರಸರ ಸಂರಕ್ಷಣೆಗೆ ಮುಂದಾಗಬೇಕು. ಗಿಡಗಳನ್ನು ನೆಟ್ಟು ದತ್ತು ತೆಗೆದುಕೊಂಡು ಉತ್ತಮವಾಗಿ ಪೋಷಿಸಿದವರಿಗೆ ಲಯನ್ಸ್ ಕ್ಲಬ್ನಿಂದ ಪೋ›ತ್ಸಾಹಕ ನಗದು ನೀಡಲಾಗುವುದು. ಎಲ್ಲರೂ ಪರಸರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.
ಗ್ರಾ.ಪಂ. ಸದಸ್ಯ ಕಿರಣ ಭಂಡಾರಿ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಶಾಲಾಭಿವೃದ್ಧಿ ಸಮಿತಿಯ ಮಾರುತಿ ನಾಯ್ಕ ಮಾತನಾಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಎನ್.ಜಿ. ಭಟ್, ಖಜಾಂಚಿ ಶ್ರೀಕಾಂತ ಹೆಗಡೆಕರ್, ಸದಸ್ಯ ಡಿ.ಡಿ. ಮಡಿವಾಳ, ಎಸ್ಡಿಎಂಸಿ ಮಾಜಿ ಅಧ್ಯಕ್ಷರಾದ ಉದಯ ಭಂಡಾರಿ, ರಾಮದಾಸ ಶೇಟ್, ವೆಂಕಟೇಶ ಶೇಟ್ ಹಾಗೂ ಎಸ್ಡಿಎಂಸಿ ಸದಸ್ಯರು, ವಿದ್ಯಾರ್ಥಿ ಪಾಲಕರು ಉಪಸ್ಥಿತರಿದ್ದರು.
ಮುಖ್ಯಾಧ್ಯಾಪಕಿ ಶಾರದಾ ಹೆಗಡೆ ಸ್ವಾಗತಿಸಿದರು. ಶಿಕ್ಷಕಿ ನಿರ್ಮಲಾ ನಾಯ್ಕ ವಂದಿಸಿದರು. ಶಾಲೆ ಎದುರಿನ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.