

ಮಂಗಳೂರು : ಲಯನ್ಸ್ ಕ್ಲಬ್ ಪಾಂಡೇಶ್ವರ ಮತ್ತು ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಮಂಗಳೂರು ಹಮ್ಮಿಕೊಂಡಿರುವ
ಹಸಿರೇ ಉಸಿರು ವನಮಹೋತ್ಸವ ಕಾರ್ಯಕ್ರಮಕ್ಕೆ ಸ್ವಾತಂತ್ರೃ ಹೋರಾಟಗಾರ ಮಟ್ಟಾರು ವಿಠಲ ಕಿಣಿ ಅವರು ನಗರದ ಲಾಲ್‌ಬಾಗ್‌ನ ಇಂದಿರಾ ಪ್ರಿಯದರ್ಶಿನಿ ವನಿತಾ ಪಾರ್ಕ್‌ನಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ಎಚ್.ಎನ್.ಮಿಥುನ್ ಮಾತನಾಡಿ ‘ ಗಿಡ ಮರಗಳಿಂದ ತುಂಬಿದ ಪರಿಸರವನ್ನು ರಕ್ಷಿಸಿ ಮುಂದಿನ ತಲೆಮಾರಿಗೆ ಬಳಸಲು ಅನುವು ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ.ಪ್ರಾಣಿ ಪಕ್ಷಿ ಮನುಷ್ಯರಿಗೆ ಆಸರೆಯಾದ ಗಿಡ ಮರಗಳ ಸಂರಕ್ಷಣೆ ಬಗ್ಗೆ ಕಾಳಜಿ ಅಗತ್ಯ ಎಂದರು.
ಲಯನ್ಸ್ ಕ್ಲಬ್ ಪಾಂಡೇಶ್ವರ ಅಧ್ಯಕ್ಷ ಸುರೇಂದ್ರ ಪಾಂಡೇಶ್ವರ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಮಾಜಿ ಕಾರ್ಪೋರೇಟರ್ ಸಂಧ್ಯಾ ಮೋಹನ್ ಆಚಾರ್,
ಪತ್ರಕರ್ತ ಪುಷ್ಪರಾಜ್ ಬಿ.ಎನ್., ಲಯನ್ಸ್ ಪದಾಧಿಕಾರಿಗಳಾದ ರೋಶನ್ ಪ್ರಸಾದ್, ಬಿ.ಎಸ್.ಕಿಶೋರ್, ರವಿಶಂಕರ್, ಮೋಹನ್ ಆಚಾರ್, ಚಂದ್ರಕಾಂತ್, ಮೋಹನ್ ಸಾಲಿಯಾನ್, ಗಣೇಶ್ ಸಾಲಿಯಾನ್, ಕೀರ್ತಿ ಜೈನ್, ಸುರೇಶ್ ಅತ್ತಾವರ, ಶೈಲೇಶ್ ಕುಮಾರ್ ಉಪಸ್ಥಿತರಿದ್ದರು.