ನೆಟ್ಟ ಗಿಡದ ಪೋಷಣೆ ಅಗತ್ಯ : ಮಹಮ್ಮದ್ ಬಡಗನ್ನೂರು ಅಭಿಪ್ರಾಯ

gida
ನೆಟ್ಟಣಿಗೆ ಮುಡ್ನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಹಮ್ಮದ್ ಬಡಗನ್ನೂರು ಗಿಡನೆಟ್ಟರು. ಶಾಲೆ ಕಾರ್ಯಾಧ್ಯಕ್ಷ ಶ್ರೀರಾಮ್ ಪಕ್ಕಳ, ಫೌಝಿಯಾ ಇಬ್ರಾಹಿಂ, ರಮೇಶ್ ರೈ ಸಾಂತ್ಯ ಮತ್ತಿತರರು ಇದ್ದರು.
Published on

ಪುತ್ತೂರು ಗ್ರಾಮಾಂತರ: ಹೆಚ್ಚಿನ ಕಡೆಗಳಲ್ಲಿ ವನಮಹೋತ್ಸವ ಆಚರಿಸಿ ಗಿಡ ನೆಡಲಾಗುತ್ತಿದೆ. ಆದರೆ ಗಿಡ ನೆಡುವುದು ಮಾತ್ರವಲ್ಲ ಅದರ ಪೋಷಣೆ ಕೂಡ ಅಗತ್ಯ ಎಂದು ಪುತ್ತೂರು ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಹೇಳಿದರು.

ನೆಟ್ಟಣಿಗೆ ಮುಡ್ನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಕೃತಿ ಇಕೋ ಕ್ಲಬ್ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಥೆ ಕಾರ್ಯಾಧ್ಯಕ್ಷ ಶ್ರೀರಾಮ್ ಪಕ್ಕಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಕೃತಿ ಸಂರಕ್ಷಣೆಯ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾದ ಅಗತ್ಯವಿದೆ ಎಂದರು.

ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ, ಗ್ರಾಪಂ ನಿಕಟಪೂರ್ವ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಮಧುರ ಇಂಟರ್‌ನ್ಯಾಷನಲ್ ಸ್ಕೂಲ್‌ನ ಸಂಚಾಲಕ ಅಬ್ದುಲ್ ರಹಿಮಾನ್ ಮೇನಾಲ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯ ರತನ್‌ಕುಮಾರ್ ನಾಕ್, ಗ್ರಾಪಂ ಸದಸ್ಯ ಇಬ್ರಾಹಿಂ, ಗ್ರಾಮಾಡಳಿತಾಧಿಕಾರಿ ಮಂಜುನಾಥ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಸೂಫಿ, ಶಿಕ್ಷಣ ತಜ್ಞ ಮಹಾಬಲ ರೈ, ಗ್ರಾಮ ಸಹಾಯಕ ರಘುನಾಥ, ಗುತ್ತಿಗೆದಾರ ಅಜೀಜ್, ನಾರಾಯಣ ನಾಯ್ಕ, ಶಾರದಾ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ಪ್ರೇಮ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಇಂದಿರಾ ವಂದಿಸಿದರು. ಶಿಕ್ಷಕರಾದ ಪುರುಷೋತ್ತಮ, ದೇವಿ ಪ್ರಕಾಶ್ ಶೆಟ್ಟಿ, ಉದಯ ಎಸ್, ಬಿಂದು ಸಹಕರಿಸಿದರು. ಕ್ಲಬ್ ಸಂಯೋಜಕಿ ಶಿಕ್ಷಕಿ ಅಮೃತವಲ್ಲಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net