

ಕಾಸರಗೋಡು: ಬದಿಯಡ್ಕ ಪಂಚಾಯಿತಿ ಮಾನ್ಯ ದೇವರಕೆರೆ ಎಂಬಲ್ಲಿ ಬಸ್ಸಿಳಿದು ರಸ್ತೆ ಅಡ್ಡ ದಾಟುವಾಗ ವ್ಯಾನ್ ಡಿಕ್ಕಿಯಾಗಿ ಕೋಪ್ಪ ಕಡಂಬೆಟ್ಟು ನಿವಾಸಿ ಎಂ.ಎಂ ಮಹಮ್ಮದ್ ಯಾನೆ ಚಿತ್ತಾರಿ ಮಹಮ್ಮದ್(75)ಮೃತಪಟ್ಟಿದ್ದಾರೆ. ಈ ಹಿಂದೆ ಮಾನ್ಯದಲ್ಲಿ ವ್ಯಾಪಾರಿಯಾಗಿದ್ದರು. ಅಪಘಾತದಿಂದ ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಕಾಸರಗೊಡು ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.