

ಮಂಗಳೂರು: ಬಸ್‌ನಿಂದ ಬಿದ್ದು ಪ್ರಯಾಣಿಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ವಾಮಂಜೂರು ಬಳಿ ಸಂಭವಿಸಿದೆ.
ಶಮೀಮುದ್ದೀನ್ (25) ಗಾಯಗೊಂಡವರು. ಅವರು ಗುರುವಾರ ಸಂಜೆ ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಹೋಗುವ ಖಾಸಗಿ ಬಸ್‌ನಲ್ಲಿ ಪ್ರಯಾಣಿಸತ್ತಿದ್ದರು. ಬಸ್ ವಾಮಂಜೂರು ಸಮೀಪದ ಪ್ರಶಾಂತ್‌ನಗರ ಕ್ರಾಸ್ ಬಳಿ ತಲುಪುವಾಗ ಬಸ್ ಚಾಲಕ ಒಮ್ಮೆಲೇ ಬ್ರೇಕ್ ಹಾಕಿದಾಗ ಬಾಗಿಲ ಬಳಿ ನಿಂತಿದ್ದ ಶಮೀಮುದ್ದೀನ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.