

ಬೀಳಗಿ: ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಮೌಲ್ಯಗಳು ಮುಂದಿನ ಶಿಕ್ಷಣ ಕಲಿಕೆಗೆ ಪೂರಕವಾಗಲಿದೆ ಎಂದು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎನ್. ಪಾಟೀಲ ಹೇಳಿದರು.
ಸ್ಥಳೀಯ ಕಾಳಿಕಾ ಕುಮಠೇಶ್ವರ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಮಂದಾರ ಶಾಲೆಯ 3ನೇ ವಾರ್ಷಿಕೋತ್ಸವ ಕಾರ್ಯಕ್ರಮ ಮಂದಾರ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಆರಂಭಗೊಂಡ ಮಂದಾರ ಶಾಲೆಯು ಇಂದು ಉತ್ತಮ ಸಂಸ್ಥೆಯಾಗಿ ಬೆಳೆಯಲು ಪೋಷಕರು ಸಂಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯೇ ಮುಖ್ಯ ಕಾರಣ. ಒಂದು ಶಿಕ್ಷಣ ಸಂಸ್ಥೆ ಉತ್ತಮವಾಗಿ ನಡೆಯಬೇಕಾದರೆ ಪೋಷಕರ ಸಹಕಾರ ಬಹಳ ಮುಖ್ಯ ಎಂದರು.
ಕುಂದರಗಿ ಜೆಮ್ ಶುಗರ್ಸ್ ನಿರ್ದೇಶಕ ರಾಮನಗೌಡ ಜಕ್ಕನಗೌಡ್ರ ಮಾತನಾಡಿ, ಮೂಲ ಶಿಕ್ಷಣವನ್ನು ಉತ್ತಮವಾಗಿ ನೀಡಬೇಕೆಂಬ ಉದ್ದೇಶದಿಂದ ಸ್ಥಾಪಿತವಾದ ಮಂದಾರ ಸಂಸ್ಥೆಯು ಕೆ.ಎಸ್. ಸೋಮನಕಟ್ಟಿ ಅವರ ನೇತೃತ್ವದಲ್ಲಿ ಅತ್ಯದ್ಭುತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುತ್ತು ಬೊರ್ಜಿ, ಸದಸ್ಯ ರಾಜು ಬೊರ್ಜಿ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿರ್ದೇಶಕ ಗಂಗಣ್ಣ ಕೆರೂರ, ವ್ಯವಸ್ಥಾಪಕ ಶಾಹಿರ್ ಬೀಳಗಿ, ಮುಖ್ಯಶಿಕ್ಷಕಿ ಸುಮಾ ಸೋಮನಕಟ್ಟಿ ಸಂಸ್ಥೆಯ ಉಪಾಧ್ಯಕ್ಷ ಶ್ರೀಶೈಲ ಸೋಮನಕಟ್ಟಿ, ನಿರ್ದೇಶಕರಾದ ಅಕ್ಷಯ ನಾಯ್ಕರ, ಮಾಹಾಂತೇಶ ಸೋಮನಕಟ್ಟಿ, ಮಲ್ಲು ಸೋಮನಕಟ್ಟಿ ಇದ್ದರು.