ಮೌಲ್ಯಗಳು ಸುಂದರ ಬದುಕಿಗೆ ಸಂಜೀವಿನಿ

blg 11-1 sanmana
ಬೀಳಗಿ ತಾಲೂಕಿನ ಚಿಕ್ಕ ಸಂಗಮದ ದೇವಸ್ಥಾನದಲ್ಲಿ ಹಮ್ಮಿಕೊಂಡ ಜಿಲ್ಲಾಮಟ್ಟದ ಶಿಬಿರದಲ್ಲಿ ಅಂದದ ಬದುಕಿಗೆ ಸುಂದರ ಮೌಲ್ಯಗಳು ಕುರಿತ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುರುರಾಜ ಲೂತಿ ಅವರನ್ನು ಸನ್ಮಾನಿಸಲಾಯಿತು. ಸಂಗಮೇಶ ಪಾನಶೆಟ್ಟಿ, ಎಂ. ಬಿ. ತಾಂಬೋಳಿ, ಎ. ಆರ್. ಬೆಳ್ಳಿಕಟ್ಟಿ, ಎಸ್.ಆರ್. ಸಂಗಮ, ಎಚ್. ಎಚ್. ಲಮಾಣಿ, ಎಸ್. ಎಚ್. ಲಮಾಣಿ, ಇದ್ದರು.
Published on

ಬೀಳಗಿ: ಮನುಷ್ಯನ ಆಯುಷ್ಯ ವೃದ್ಧಿಗೆ ಮೌಲ್ಯಗಳು ಸಂಜೀವಿನಿ ಇದ್ದಂತೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗುರುರಾಜ ಲೂತಿ ಹೇಳಿದರು.

ತಾಲೂಕಿನ ಚಿಕ್ಕಸಂಗಮದ ದೇವಸ್ಥಾನದಲ್ಲಿ ಭಾರತ ಸೇವಾದಳ ಬಾಗಲಕೋಟೆ ಜಿಲ್ಲಾ ಹಾಗೂ ಬೀಳಗಿ ತಾಲೂಕು ಸಮಿತಿ ಶಾಲಾ ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಶಿಕ್ಷಕರಿಗಾಗಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಿಬಿರದಲ್ಲಿ ‘ಅಂದದ ಬದುಕಿಗೆ ಸುಂದರ ಮೌಲ್ಯಗಳು’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಮಕ್ಕಳು ನಾಳಿನ ನಾಗರಿಕರು ಅನ್ನುವುದನ್ನು ಕೇವಲ ಭಾಷಣದಲ್ಲಿ ಹೇಳಿದರೆ ಸಾಲದು, ಮಕ್ಕಳು ಉತ್ತಮ ನಾಗರಿಕರಾಗಲು ಬೇಕಾಗುವ ಮೌಲಿಕ ಬದುಕಿನ ಅವಕಾಶಗಳನ್ನು ಹಿರಿಯರು ಒದಗಿಸಿಕೊಡಬೇಕಿದೆ ಎಂದರು.

ಶಿಬಿರ ಸಂಯೋಜಕ ಸಂಗಮೇಶ ಪಾನಶೆಟ್ಟಿ, ಎಂ. ಬಿ. ತಾಂಬೋಳಿ, ಎ. ಆರ್. ಬೆಳ್ಳಿಕಟ್ಟಿ, ಎಸ್. ಆರ್. ಸಂಗಮ, ಎಚ್. ಎಚ್. ಲಮಾಣಿ, ಎಸ್. ಎಚ್. ಲಮಾಣಿ, ಎಸ್.ಬಿ. ಯರಗಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net