

ಕಕಮರಿ: ಅನ್ನ, ಅಕ್ಷರ ದಾಸೋಹ ನೀಡುವ ಮೂಲಕ ಅನೇಕ ಮಕ್ಕಳಿಗೆ ಬದುಕು ಕಟ್ಟಿಕೊಡುವಲ್ಲಿ ಗ್ರಾಮದ ಸದ್ಗುರು ರಾಯಲಿಂಗೇಶ್ವರ ಶಿಕ್ಷಣ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ ಎಂದು ನೇಲುಗಿ ಮಠದ ಜಗದ್ಗುರು ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಗ್ರಾಮದ ಅಮ್ಮಾಜೇಶ್ವರಿ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೇವಿಗೆ ಅಭಿಷೇಕ ಮತ್ತು ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿ, ಕಾವಿ ತೊಟ್ಟ ಸನ್ಯಾಸಿಯೊಬ್ಬ ಸಮಾಜದಲ್ಲಿ ಧಾರ್ಮಿಕ, ಶೆಕ್ಷಣಿಕ ಕ್ರಾಂತಿ ಮಾಡಿದ್ದು ಗಮನಾರ್ಹ ಸಾಧನೆ. ಮಾದರಿ ಕಾರ್ಯ ಹೆಚ್ಚೆಚ್ಚು ಮಾಡಿದರೆ ಕಾವಿಗೆ ವೌಲ್ಯ ಹೆಚ್ಚುತ್ತದೆ ಎಂದರು.
ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ಮಾತನಾಡಿದರು. ಡಾ. ಪೈರೋಜ ಹುಸೇನಿ, ಇನಾಮ್ದಾರ್ ಬಾಬಾ, ಅರಕೇರಿಯ ಬನಸಿದ್ದ ಸ್ವಾಮೀಜಿ, ದೇವಸ್ಥಾನದ ಅಧ್ಯಕ್ಷ
ಅಪ್ಪುಗೌಡ ಪಾಟೀಲ, ಕಾರ್ಯಾಧ್ಯಕ್ಷ ಗಿರೀಶ ಬಸರಗಿ, ಹಿರಿಯರಾದ ಲಕ್ಷ್ಮಣ ಗುರ್ಕಿ, ಶಿವಗುರು ಬಸರಗಿ, ಸಂಗಮೇಶ ಬಸರಗಿ ಇತರರಿದ್ದರು.