ಮೌಲ್ಯ ಪತ್ರಿಕೋಧ್ಯಮ ರತ್ನ ಪ್ರಶಸ್ತಿ ವಿತರಣೆ

01
Published on

ಬೈಲಹೊಂಗಲ: ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ತುರಮರಿ ಅವರಿಗೆ ರಾಮದುರ್ಗದ ಮೌಲ್ಯ ಸಂಪದ ಸ್ವಯಂ ಸೇವಾ ಸಂಸ್ಥೆ, ಪತ್ರಿಕಾ ಬಳಗದ ಆಶ್ರಯದಲ್ಲಿ 2020 ನೇ ಸಾಲಿನ ರಾಜ್ಯಮಟ್ಟದ ಮೌಲ್ಯ ಪತ್ರಿಕೋಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕ ಮಹಾದೇವಿ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ಸಂಸ್ಥೆಯ 15ನೇ ವಾರ್ಷಿಕೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ವಿಬುಧ ಸಮ್ಮಾನ್ ಪರಮ ಸಂಸ್ಕೃತಿ ವೈಭವ, ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಿರಿಗನ್ನಡ ವೇದಿಕೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷ್ಯೆ ರಜನಿ ಜೀರಗ್ಯಾಳ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡ ಜಾನಪದ ಪರಿಷತ್ ತಾಲೂಕಾಧ್ಯಕ್ಷ ಚಂದ್ರಶೇಖರ ಕೊಪ್ಪದ, ರಾಮದುರ್ಗ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಎಸ್.ಪಾಟೀಲ, ದಾವಣಗೆರೆಯ ಹಿರಿಯ ಸಾಹಿತಿ ಯು.ಎನ್.ಸಂಗನಾಳಮಠ, ಕಜಾಪ ಜಿಲ್ಲಾದ್ಯಕ್ಷ ಮೋಹನ ಗುಂಡ್ಲೂರ, ಬೆಳಗಾವಿಯ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸುಣಗಾರ, ಮೌಲ್ಯ ಸಂಪದ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ್ಯೆ ಶೈಲಾ ಸೊಗಲದ, ಕಲಾವಿದ ಬಾಲಕೃಷ್ಣ ಚೋಪಡೆ, ಮಹಾಂತೇಶ ರಾಜಗೋಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net