ಉತ್ತಮ ಸಂಸ್ಕಾರದಿಂದ ಶಿಕ್ಷಣಕ್ಕೆ ಮೌಲ್ಯ

hbr
Published on

ಹೆಬ್ರಿ: ವಿದ್ಯಾರ್ಥಿಗಳು ಅಂಕ ಗಳಿಸುವುದರೊಂದಿಗೆ ಸಂಸ್ಕಾರವನ್ನು ಪಡೆದುಕೊಂಡಾಗ ಶಿಕ್ಷಣಕ್ಕೆ ಮೌಲ್ಯ ಬರುತ್ತದೆ. ಸಂಸ್ಕಾರವಂತ ವಿದ್ಯಾರ್ಥಿಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದರು.

ಹಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಅವರ ಸಂಕಲ್ಪದಂತೆ ಅದಮಾರು ಮಠದ ಶ್ರೀ ವಿಬುಧೇಶತೀರ್ಥ ಚಾರಿಟೆಬಲ್ ಟ್ರಸ್ಟ್ ಮೂಲಕ ಶಾಂತಿನಿಕೇತನದ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ನಡೆಯುತ್ತಿರುವ ಮೌಲ್ಯಯುತ ಸಂಸ್ಕಾರ ಶಿಕ್ಷಣ ಬೇಸಿಗೆ ಶಿಬಿರವನ್ನು ಉಡುಪಿಯಲ್ಲಿ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಹೆತ್ತವರನ್ನು ಗೌರವಿಸುವ ನಿತ್ಯಪರಿಪಾಠ ನಮ್ಮದಾಗಬೇಕು. ಎಲ್ಲರೂ ಅಂಕಗಳಿಗೆ ಶಿಕ್ಷರನ್ನು ಗೌರವಿಸುತ್ತಾರೆ ಆದರೆ ಮೌಲ್ಯಯುತ ವಿಚಾರಗಳನ್ನು ಅರಿತು ಸಂಸ್ಕಾರವಂತರಾಗಿ ಗೌರವಿಸುವುದು ಅಗತ್ಯವಿದೆ ಎಂದು ಸ್ವಾಮೀಜಿ ಹೇಳಿದರು.

ಶಾಂತಿನಿಕೇತನದ ಸಂಸ್ಥಾಪಕ ರಾಜೇಶ್ ಮಾತನಾಡಿ, ಶಾಂತಿನಿಕೇತನದ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಬಿರ ಮಾಡಿರುವುದಕ್ಕೆ ಧನ್ಯವಾದಗಳು. ನಮ್ಮ ವಿದ್ಯಾರ್ಥಿಗಳು ಇಂದಿಗೂ ಬೇಸಿಗೆ ಶಿಬಿರದಲ್ಲಿ ಹೇಳಿದ್ದನ್ನು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಇಲ್ಲಿ ಸಿಗುವ ಮೌಲ್ಯ ಪಡೆಯಬೇಕು ಎಂದು ಹೇಳಿದರು.

ಶಿಬಿರದ ವ್ಯವಸ್ಥಾಪಕ ಗೋವಿಂದರಾಜ್ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ, ನೀತಿ ಕಥೆಗಳ ಪುಸ್ತಕ ನೀಡಲಾಯಿತು. ಓಂಪ್ರಕಾಶ ಭಟ್ ನಿರೂಪಿಸಿದರು. ರಾಜೇಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net