ಜನಪದದಲ್ಲಿದೆ ಮೌಲ್ಯಾಧಾರಿತ ಸಾಹಿತ್ಯ

Koppa janapada
ನಿಲುವಾಗಿಲಿನಲ್ಲಿ ಹಮ್ಮಿಕೊಂಡಿದ್ದ ಹರಿಹರಪುರ ಹೋಬಳಿ ಮಟ್ಟದ ಜಾನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮವನ್ನು ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಉದ್ಘಾಟಿಸಿದರು. ದಿವಾಕರ್ ಭಟ್, ಅನಿಲ್‌ಕುಮಾರ್, ನಂದಿನಿ ಇತರರಿದ್ದರು.
Published on

ಕೊಪ್ಪ: ಜನರಿಂದಲೇ ಬೆಳೆದುಬಂದ ಜಾನಪದ ಸಾಹಿತ್ಯದಲ್ಲಿ ಮೌಲ್ಯಾಧಾರಿತ, ಸುಸಂಸ್ಕೃತ ಸಾಹಿತ್ಯ ಅಡಗಿದೆ ಎಂದು ಗೌರಿಗದ್ದೆ ದತ್ತಾವಧೂತ ವಿನಯ್ ಗುರೂಜಿ ಹೇಳಿದರು.

ನಿಲುವಾಗಿಲಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಮ್ಮಿಕೊಂಡಿದ್ದ ಹರಿಹರಪುರ ಹೋಬಳಿ ಮಟ್ಟದ ಜಾನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳು ಕಲೆ, ಸಾಹಿತ್ಯ, ಸಂಸ್ಕೃತಿಗಳ ಸಂರಕ್ಷಣೆಯ ಕೇಂದ್ರಗಳಾಗಿವೆ. ಹಳ್ಳಿಗಳಲ್ಲಿ ಜಾನಪದ ಸಂಸ್ಕೃತಿ ಉಳಿಸಲು ಅಲ್ಲಿನ ಸಂಘ ಸಂಸ್ಥೆಗಳು ಕಾರಣವಾಗಿವೆ. ನಾಡೋಜ ಡಾ. ಎಚ್.ಎಲ್.ನಾಗೇಗೌಡ ಸ್ಥಾಪಿತ ಸಂಸ್ಥೆ ಕರ್ನಾಟಕ ಜಾನಪದ ಪರಿಷತ್ತು ಉತ್ತಮವಾದ ಸೇವೆ ಸಲ್ಲಿಸುತ್ತಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಎಲ್ಲ ಬುಡಕಟ್ಟು ಜನಾಂಗದವರ ಸಾಹಿತ್ಯ, ಸಂಗೀತ, ಸಂಸ್ಕೃತಿ, ಉಡುಗೆ, ಆಚಾರ, ವಿಚಾರಗಳನ್ನು ಸಂರಕ್ಷಿಸಲು ಜಾನಪದ ಪರಿಷತ್ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಜನಪದ ಕಲಾವಿದರಿಗೆ, ಸರ್ಕಾರದಿಂದ ಹೆಚ್ಚು ಪ್ರೋತ್ಸಾಹವಿಲ್ಲದೆ, ವೇದಿಕೆಗಳಿಲ್ಲದೆ, ಮಾಸಾಶನ, ವೇತನ ಭತ್ಯೆಗಳಿಲ್ಲದೆ ಸಂಕಷ್ಟ ದಲ್ಲಿದ್ದಾರೆ. ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆದು, ಅವರಿಗೆ ಅಗತ್ಯ ಪ್ರೋತ್ಸಾಹ ನೀಡಿದ್ದೆ ಆದರೆ ಮುಂದಿನ ಪೀಳಿಗೆಯವರೆಗೂ ಜನಪದ ಕಲೆ ಮುಂದುವರಿಯುತ್ತದೆ ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ದಿವಾಕರ್ ಭಟ್ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಜನಪದ ಕಲೆ, ಸಂಸ್ಕೃತಿ, ಸಾಹಿತ್ಯ ಬಹಳ ಅತ್ಯಗತ್ಯವಾಗಿವೆ ಎಂದರು.
ಕಜಾಪ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್, ನಿಲುವಾಗಿಲು ಗ್ರಾಪಂ ಅಧ್ಯಕ್ಷ ಪದ್ಮನಾಭ, ಸದಸ್ಯ ಮಿತ್ರ, ಪದಾಧಿಕಾರಿಗಳಾದ ನಂದಿನಿ, ಶ್ರೀಕಂಠ, ಮಂಜುಳಾ, ಸುಮಾ, ನಾಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net