ಮೌಲ್ಯವರ್ಧನೆಯಿಂದ ಹೆಚ್ಚಿನ ಲಾಭ

24LNG02
Published on

ಲಿಂಗಸುಗೂರು: ತಾಲೂಕಿನಲ್ಲಿ ಅತಿ ಹೆಚ್ಚು ಪಪ್ಪಾಯ ಬೆಳೆಯಲಾಗುತ್ತಿದ್ದು, ಅನಿರೀಕ್ಷಿತವಾಗಿ ದರ ಕುಸಿದರೆ ರೈತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಬೆಳೆಯನ್ನು ಮೌಲ್ಯವರ್ಧನೆ ಮಾಡಿದಾಗ ಹೆಚ್ಚಿನ ಲಾಭ ಗಳಿಸಬಹುದು ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥೆ ಡಾ.ವಾಣಿಶ್ರೀ ಹೇಳಿದರು.

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಪಪ್ಪಾಯ ಮೌಲ್ಯವರ್ಧನೆ ಮತ್ತು ಮಹತ್ವದ ಕುರಿತ ತರಬೇತಿ ಶಿಬಿರ ಉದ್ಘಾಟಿಸಿ ಗುರುವಾರ ಮಾತನಾಡಿದರು. ಮಾರುಕಟ್ಟೆಯಲ್ಲಿ ಪಪ್ಪಾಯ ಬೆಲೆ ಕುಸಿತಗೊಂಡರೆ ರೈತ ಮಹಿಳೆಯರು ಮನೆಯಲ್ಲಿಯೇ ಪಪ್ಪಾಯ ಹಣ್ಣಿನಿಂದ ಜಾಮ್, ಜೆಲ್ಲಿ, ರೋಲ್, ಹಲ್ವಾ, ಟೂಟಿಫ್ರೂಟಿಗಳನ್ನು ತಯಾರಿಸಬೇಕು. ಈ ಮೂಲಕ ಹೆಚ್ಚಿನ ಲಾಭ ಗಳಿಸಬಹುದಾಗಿದೆ. ಪಪ್ಪಾಯ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net