ಮೌಲ್ಯವರ್ಧಿತ ಬೋಧನೆ ಅಗತ್ಯ

25ckd2
Published on

ಚಿಕ್ಕೋಡಿ: ಸಾಮಾಜಿಕ ಮಾಧ್ಯಮಗಳನ್ನು ಶೈಣಿಕ ಚಟುವಟಿಕೆಗಳಿಗೆ ಬಳಸುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಪ್ರೊ.ಎನ್​.ಆರ್​. ಪಾಟೀಲ ಹೇಳಿದರು.

ಇಲ್ಲಿನ ಚೌಸನ್​ ಶಿಣ ಮಾಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಮಾಜಿಕ ಮಾಧ್ಯಮ ಮತ್ತು ಇಂರ್ಟನೆಟ್​ ಪ್ರಾಬಲ್ಯದ ಪ್ರಸ್ತುತ ಸನ್ನಿವೇಶದಲ್ಲಿ ಶಿಕರ ಪಾತ್ರ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅತಿಯಾದ ಸಾಮಾಜಿಕ ಮಾಧ್ಯಮ ಹಾಗೂ ಇಂರ್ಟನೆಟ್​ ಬಳಕೆಯಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡಗಳಿಗೆ ಸಿಲುಕದಂತೆ ಶಿಕರು ಮೌಲ್ಯವರ್ಧಿತ ಕೌಶಲಗಳನ್ನು ಬೋಧಿಸಬೇಕು ಎಂದು ಸಲಹೆ ನೀಡಿದರು. ಪ್ರೊ.ಸಿ.ಆರ್​.ಜೋಶಿ ಮಾತನಾಡಿ, ಪ್ರಸ್ತುತದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚುತ್ತಿದ್ದು, ಉತ್ತಮ ಸಂವಹನ ಕೌಶಲ ವೃದ್ಧಿಸಿಕೊಳ್ಳುವಲ್ಲಿ ಸಾಮಾಜಿಕ ಮಾಧ್ಯಮಗಳು ಸಹಕಾರಿಯಾಗಿವೆ ಎಂದರು. ಡಾ.ಕನಕಾಚಲ ಕನಕಗಿರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಧಿಕಾ ಜಾಧವ, ಶಿಲ್ಪಾ ಪಾಟೀಲ, ಆಸಮ ಜಮಾದಾರ್​, ಕವಿತಾ, ಇಂದಿರಾ ಮೇತ್ರಿ, ಪ್ರೊ.ಎನ್​.ಎಸ್​ ಶಿಂಧೆ ಇತರರಿದ್ದರು. ಐಶ್ವರ್ಯ ನಾವಿ ಹಾಗೂ ಸುಜಾತಾ ಚಂದ್ಗಡೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net